×
Ad

ಬೆಂಗಳೂರು | ಬೀದಿ ನಾಯಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿ: ಆರೋಪಿ ಪತ್ತೆಗೆ ಪೊಲೀಸರಿಂದ ಶೋಧ

Update: 2023-01-09 22:47 IST

ಬೆಂಗಳೂರು, ಜ.9: ಬೀದಿ ನಾಯಿಯ ಮೇಲೆ ಕಾರು ಚಲಾಯಿಸಿ ಭೂಪನೊಬ್ಬ ಪರಾರಿಯಾಗಿರುವ ಘಟನೆ ಜ್ಞಾನಭಾರತಿಯ ಮುತ್ತುರಾಯನಗರದಲ್ಲಿ ವರದಿಯಾಗಿದ್ದು, ಆರೋಪಿ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿನ್ನೆ ರಾತ್ರಿ ಮುತ್ತುರಾಯನಗರದ ಸಪ್ತಗಿರಿ ರೆಸಿಡೆನ್ಸಿ ಮುಂಭಾಗದ ರಸ್ತೆಯಲ್ಲಿ ಮಲಗಿದ್ದ ಶ್ವಾನದ ಮೇಲೆ ದುಷ್ಕರ್ಮಿ  ಕಾರು ಹತ್ತಿಸಿದ್ದಾನೆ. ಆನಂತರ ನಡು ರಸ್ತೆಯಲ್ಲೇ ಶ್ವಾನ ಬಿದ್ದು ಒದ್ದಾಡಿದೆ. ಕೆಎ 05 ಎಂಪಿ 5836 ರಿಜಿಸ್ಟರ್ ನಂಬರ್ ನ ಕಾರ್ ಚಾಲಕ ಈ ಅಮಾನವೀಯ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.

ಉದ್ದೇಶಪೂರಕವಾಗಿಯೇ ಶ್ವಾನದ ಮೇಲೆ ಕಾರು ಹತ್ತಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳೀಯರು ನೀಡಿದ ದೂರಿನ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆತನ ಪತ್ತೆಗೆ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Similar News