ಗಂಗೊಳ್ಳಿ: ಗಾಂಜಾ ಸೇವನೆ ಆರೋಪಿ ವಶ
Update: 2023-01-10 21:25 IST
ಗಂಗೊಳ್ಳಿ: ಗಾಂಜಾ ಸೇವನೆ ಶಂಕೆಯಲ್ಲಿ ಯುವಕನೋರ್ವನನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಗಾಂಜಾ ಸೇವನೆ ಖಚಿತವಾಗಿದೆ.
ಜಮಾಲುದ್ದಿನ್ (28) ಎನ್ನುವಾತನನ್ನು ತ್ರಾಸಿ ಪ್ರವಾಸಿ ಮಂದಿರದ ಬಳಿ ವಶಕ್ಕೆ ಪಡೆಯಲಾಗಿದ್ದು, ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.