ಟಿಪ್ಪು ಕಾಲದ ಕಟ್ಟಡಗಳ ಜವಾಬ್ದಾರಿಯನ್ನು ವಂಶಸ್ಥರಿಗೆ ನೀಡುವಂತೆ ಆಗ್ರಹ

Update: 2023-01-10 17:50 GMT

ಬೆಂಗಳೂರು, ಜ.10: ಮೈಸೂರಿನ ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ನಿರ್ಮಿಸಲಾದ ಸ್ಮಾರಕ, ಮಸೀದಿ ಹಾಗೂ ಇತರೆ ಕಟ್ಟಡಗಳ ಜವಾಬ್ದಾರಿಯನ್ನು ಟಿಪ್ಪು ಸುಲ್ತಾನ್ ವಂಶಸ್ಥರಿಗೆ ದೊರಕಬೇಕು ಎಂದು ಟಿಪ್ಪು ಸುಲಾನ್ ವಂಶಸ್ಥರಾದ ಸಹೇಬ್‍ಜಾದ್ ಸೈಯದ್ ಮನ್ಸೂರ್ ಅಲಿ ಆಗ್ರಹಿಸಿದರು.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ  ಟಿಪ್ಪು ಸುಲ್ತಾನ್ ಅವರ ಕುಟುಂಬಸ್ಥರಿಗೆ ಅಪಾಯವಿದೆ ಎಂದು ಕೊಲ್ಕತ್ತದಲ್ಲಿ ಭೂಮಿಯನ್ನು ನೀಡಿ ಸ್ಥಳಾಂತರಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಟಿಪ್ಪು ಹೆಸರನ್ನು ಕೇವಲ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಟಿಪ್ಪು ಸುಲ್ತಾನ್ ಅವರಿಗೆ ಸಂಬಂಧಿಸಿದ ಸ್ಮಾರಕ, ಮಸೀದಿ, ಐತಿಹಾಸಿಕ ಕಟ್ಟಡಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದುದರಿಂದ ಆ ಸ್ಥಳಗಳ ಜವಾಬ್ದಾರಿಯನ್ನು ಟಿಪ್ಪು  ಸುಲ್ತಾನ್ ವಂಶಸ್ಥರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಟಿಪ್ಪು ಸುಲ್ತಾನ್ ವಂಶಸ್ಥರನ್ನು ಬೋರ್ಡ್ ಕಮಿಟಿಯ ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳಬೇಕು. ಊರುಸ್ ಸೇರಿದಂತೆ ವರ್ಷಪೂರ್ತಿ ಅವುಗಳ ಉಸ್ತುವಾರಿಯನ್ನು ನಿರ್ವಹಿಸುವ ಅವಕಾಶ ಕಲ್ಪಿಸಿಕೊಡಬೇಕು ಎಂದು ಅವರು ತಿಳಿಸಿದರು.

Similar News