ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ, ಮಗು ಸಾವು: ಬಿಜೆಪಿಯ 40% ಕಮಿಷನ್ ಸಾಧನೆಯ ಫಲಿತಾಂಶ ಎಂದ ಡಿಕೆಶಿ
ಬೆಂಗಳೂರು, ಜ.10: 'ನಗರದ ನಾಗಾವರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿರುವುದು ನಿಜಕ್ಕೂ ದುಃಖಕರ. ಈ ಘಟನೆ ಬಿಜೆಪಿಯ 40% ಕಮಿಷನ್ ಸಾಧನೆಯ ಫಲಿತಾಂಶ. ಬಿಜೆಪಿ ಆಡಳಿತ ಹಾಗೂ ಅವರ ಅಭಿವೃದ್ಧಿ ಕಾರ್ಯಗಳ ಗುಣಮಟ್ಟ ಎಷ್ಟು ಕಳಪೆಯಾಗಿವೆ ಎಂಬುದಕ್ಕೆ ಹಿಡಿದ ಕೈಗನ್ನಡಿ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, 'BJP ನಾಯಕರ ಜೇಬಿಗೆ 40%ಕಮಿಷನ್ ಇಳಿಯುವುದು ಕೊನೆಯಾದಾಗಲೇ ರಾಜ್ಯದ ಅಭಿವೃದ್ಧಿ ಸಾಧ್ಯ. ಇಲ್ಲವಾದಲ್ಲಿ ಮೆಟ್ರೋ ಪಿಲ್ಲರ್ ಕುಸಿತ, ರಸ್ತೆ ಗುಂಡಿಗಳು, ಸಾವು-ನೋವು ತಪ್ಪಿದ್ದಲ್ಲ. ಈ ಘಟನೆ ಬಗ್ಗೆ ಪಾರದರ್ಶಕ ತನಿಖೆಯಾಗಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗಬೇಕು. ಇಂತಹ ಘಟನೆಗಳೇ ಬೆಂಗಳೂರಿನ ಬ್ರ್ಯಾಂಡ್‌ಗೆ ಕಪ್ಪು ಚುಕ್ಕೆಯಾಗುತ್ತಿವೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಬಿದ್ದು ತಾಯಿ, ಮಗು ಸಾವು ಪ್ರಕರಣ: BMRCL ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ FIR
ನಾಗಾವರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿರುವುದು ನಿಜಕ್ಕೂ ದುಃಖಕರ. ಈ ಘಟನೆ ಬಿಜೆಪಿಯ 40% ಕಮಿಷನ್ ಸಾಧನೆಯ ಫಲಿತಾಂಶ. ಬಿಜೆಪಿ ಆಡಳಿತ ಹಾಗೂ ಅವರ ಅಭಿವೃದ್ಧಿ ಕಾರ್ಯಗಳ ಗುಣಮಟ್ಟ ಎಷ್ಟು ಕಳಪೆಯಾಗಿವೆ ಎಂಬುದಕ್ಕೆ ಹಿಡಿದ ಕೈಗನ್ನಡಿ.
— DK Shivakumar (@DKShivakumar) January 10, 2023
1/2 pic.twitter.com/eQtuk9sWwK