ಮಾಡಾವು | ದಫ್ ಸ್ಪರ್ಧೆ, ಸೌಹಾರ್ದ ಸಂಗಮ: ಕೃಷ್ಣಾಪುರ ತಂಡಕ್ಕೆ ದಫ್ ಪ್ರಶಸ್ತಿ

Update: 2023-01-11 11:25 GMT

ಬಂಟ್ವಾಳ: ಎಸ್ಕೆಎಸ್ಎಸ್ಎಫ್  ಮಾಡಾವು ಶಾಖೆ ಇದರ ಆಶ್ರಯದಲ್ಲಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮವು ಮಾಡಾವು ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ  ನಡೆಯಿತು.

ಕಾರ್ಯಕ್ರಮದಲ್ಲಿ ಸಯ್ಯಿದ್ ಸರ್ಫುದ್ದೀನ್ ತಂಙಳ್ ಸಾಲ್ಮರ ಪ್ರಾರ್ಥನೆ ನೆರವೇರಿಸಿದರು. ಮಾಡಾವು ಬಿಜೆಎಂ ಖತೀಬ್ ಮುಹಮ್ಮದ್ ರಫೀಕ್ ಬಾಖವಿ ಉದ್ಘಾಟಿಸಿ, ದಫ್ ಸ್ವಾಗತ ಸಮಿತಿ ಅಧ್ಯಕ್ಷ ಪುತ್ತುಂಞಿ ಮಾಡಾವುಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಸ್ಕೆಎಸ್ಎಸ್ಎಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಧರ್ಮವನ್ನು ರಾಜಕೀಯಕ್ಕೆ ಎಳೆದು ತರಬಾರದು, ಹಿಂದಿನ ಕಾಲದ ಸೌಹಾರ್ದತೆಯನ್ನು ಮತ್ತೆ ಪುನರ್ ಸ್ಥಾಪಿಸಲು ನಾವೆಲ್ಲರೂ ಕಟಿಬದ್ಧರಾಗಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸದಾಶಿವ ರೈ ದಂಬೆಕಾನ ಮಾತನಾಡಿ, ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು ಇದನ್ನರಿತು ನಾವೆಲ್ಲರೂ ಶಾಂತಿ, ಸೌಹಾರ್ದತೆಯನ್ನು ಮೈಗೂಡಿಸಿಕೊಂಡು ಬದುಕಬೇಕು ಎಂದರು.

ದ.ಕ.ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡ ಭಾರತದ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು ಎಂದರು.

ಬಿಜೆಎಂ ಗೌರವಾಧ್ಯಕ್ಷ ಎಂ. ಇಬ್ರಾಹಿಂ ಹಾಜಿ, ಅಧ್ಯಕ್ಷ ಪಿ.ಎಂ . ಅಬ್ದುಲ್ ಖಾದರ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಹಾಜಿ ಮಹಮೂದ್ ಪಿ.ವೈ, ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದ ಕಾರ್ಯದರ್ಶಿ ಗೋಪಾಲಕೃಷ್ಣ ಪೂಜಾರಿ, ಕೆಯ್ಯೂರು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಪ್ರಬಂಧಕ ಸದಾಶಿವ ಭಟ್, ಕೆದಂಬಾಡಿ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ, ಮಾಡಾವು ಜಿವೈಎ ಗೌರವಾಧ್ಯಕ್ಷ ಎಂ.ಹುಸೈನಾರ್ ಸಂತೋಷ್, ಅಧ್ಯಕ್ಷ ಹಾರಿಸ್ ಪಾತುಂಜ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಕ್ಯಾಂಪ್ಕೋ, ಮಾಡಾವು ಬಿಜೆಎಂ ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಫ್ಯಾಮಿಲಿ, ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಕೆ.ಜಯರಾಮ ರೈ, ಕೆಯ್ಯೂರು ಗ್ರಾ.ಪಂ.ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು, ಎ.ಕೆ.ಅಬ್ದುಲ್ ಖಾದರ್ ಮೇರ್ಲ, ಮಾಜಿ ಸದಸ್ಯರಾದ ಮೋಹನ್ ರೈ ಬೇರಿಕೆ, ಶಿವರಾಮ ರೈ ಕಜೆ, ಪ್ರಾಂಶುಪಾಲ ಇಸ್ಮಾಯಿಲ್ ಮಾಸ್ಟರ್, ಉಪ ಪ್ರಾಂಶುಪಾಲ ಕೆ.ಎಸ್.ವಿನೋದ್ ಕುಮಾರ್, ಇಬ್ರಾಹಿಂ ಹಾಜಿ ಫ್ಯಾಮಿಲಿ, ಜಮಾಲ್ ಮಣಿಮಜಲ್, ಎಸ್.ಕೆ. ಝೈನುದ್ದೀನ್ ಮಾಡಾವು (ದುಬೈ), ಎಸ್ಕೆಎಸ್ಎಸ್ಎಫ್ ದ.ಕ ಈಸ್ಟ್ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ,  ಕುಂಬ್ರ ವಲಯಾಧ್ಯಕ್ಷ ಕರೀಂ ದಾರಿಮಿ, ತಿಂಗಳಾಡಿ ಕ್ಲಸ್ಟರ್ ಅಧ್ಯಕ್ಷ ಇಬ್ರಾಹಿಂ ಹಾಜಿ, ಮಾಡಾವು ಶಾಖಾದ್ಯಕ್ಷ ನಿಜಾಮುದ್ದೀನ್ ಹೋನೆಸ್ಟ್, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಟಿ.ಎಂ, ಕೋಶಾಧಿಕಾರಿ ರಫೀಕ್ ದಟ್ಟ, ಇಸ್ಮಾಯಿಲ್ ಅಸ್ಲಮಿ ಕಟ್ಟತ್ತಾರು, ಬಶೀರ್ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ಶಾಫಿ ಕಣಿಯಾರ್, ಬಿ.ಕೆ. ಹನೀಫ್ ಮುಸ್ಲಿಯಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ವಾಗತ ಸಮಿತಿ ಕನ್ವೀನರ್ ಇಬ್ರಾಹಿಂ ಅಯ್ಯನಕಟ್ಟೆ ಸ್ವಾಗತಿಸಿ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜ್ಞಾನ ಅಧ್ಯಾಪಕ ಎಸ್.ಎಂ.ಇಬ್ರಾಹಿಂ ಮಾಸ್ಟರ್ ಪ್ರಸ್ತಾವನೆ ಗೈದರು. ನೌಫಲ್ ಕುಡ್ತಮುಗೇರು ಹಾಗೂ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಕೃಷ್ಣಾಪುರ ತಂಡಕ್ಕೆ ಪ್ರಶಸ್ತಿ; ರಾಜ್ಯದ ವಿವಿಧೆಡೆಯ ಹನ್ನೊಂದು ತಂಡಗಳು ಭಾಗವಹಿಸಿದ್ದ ಈ ದಫ್ ಸ್ಪರ್ಧೆಯಲ್ಲಿ ಸುರತ್ಕಲ್ - ಕೃಷ್ಣಾಪುರದ ಲಜ್ ನತುಲ್ ಅನ್ಸಾರಿಯಾ ದಫ್ ತಂಡ ಪ್ರಥಮ, ಉಳ್ಳಾಲ - ಅಳೇಕಲದ ಅನ್ನಜಾತ್ ದಫ್ ಎಸೋಸಿಯೇಶನ್ ದ್ವಿತೀಯ ಹಾಗೂ ಶಿರ್ವ - ಮಂಚಕಲ್ ನ ಅಲ್ ಅಮೀನ್ ದಫ್ ತಂಡವು ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಕಟಪಾಡಿ - ಮಣಿಪುರದ ಖಲಂದರ್ ಷಾ ದಫ್ ತಂಡದ ಹಂಝ ಉಸ್ತಾದ್, ಅಝೀಝ್ ಮತ್ತು ನಿಜಾಮುದ್ದೀನ್ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Similar News