ಇರಾ: ಶತಾಯುಷಿ ಕಲ್ಯಾಣಿ ನಿಧನ
Update: 2023-01-12 12:58 IST
ಕೊಣಾಜೆ, ಜ.12: ಇರಾ ಪಿಲಿಪಂಜರ ನಿವಾಸಿ ಶತಾಯುಷಿ ಕಲ್ಯಾಣಿ(102) ಗುರುವಾರ ನಿಧನರಾದರು.
ಪ್ರಸೂತಿ ತಜ್ಞೆಯಾಗಿ ಗುರುತಿಸಿದ್ದ ಇವರು ಪರಿಸರದಲ್ಲಿ ಹಿರಿಯಜ್ಜಿ ಎಂದೇ ಪ್ರಖ್ಯಾತಿ ಪಡೆದಿದ್ದರು. ಬುಧವಾರದ ವರೆಗೂ ನಡೆದಾಡಿಕೊಂಡಿದ್ದ ಇವರು ಗುರುವಾರ ಬೆಳಗ್ಗೆ ಅಸೌಖ್ಯದಿಂದ ನಿಧನರಾದರು.
ಇವರ ಒಟ್ಟು ಹನ್ನೊಂದು ಮಕ್ಕಳ ಪೈಕಿ ಸದ್ಯ ಐದು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.