ಮಂಗಳೂರು: IEEE BIT ವಿದ್ಯಾರ್ಥಿ ಘಟಕದ ಉದ್ಘಾಟನೆ

Update: 2023-01-13 06:17 GMT

ಮಂಗಳೂರು: ಮಾನವೀಯತೆಯ ಉನ್ನತೀಕರಣಕ್ಕಾಗಿ ತಂತ್ರಜ್ಞಾನ ಬಳಕೆಯಾಗಲಿ ಎಂದು BIT ಪ್ರಾಂಶುಪಾಲ ಡಾ. ಎಸ್.ಐ.ಮಂಜೂರ್ ಬಾಷಾ ಹೇಳಿದ್ದಾರೆ.

ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನ ಇಂಟರ್‌ನ್ಯಾಷನಲ್ ಸೆಮಿನಾರ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ IEEE BIT ವಿದ್ಯಾರ್ಥಿ ಘಟಕ ( IEEE (Institute of Electrical and Electronics Engineers)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಣಿಪಾಲದ MIT ಕಾಲೇಜಿನ I&CT ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಪೂರ್ಣಲತಾ ಅವರು IEEE BIT ವಿದ್ಯಾರ್ಥಿ ಘಟಕಕ್ಕೆ ಚಾಲನೆ ನೀಡಿದರು. ಗಣ್ಯರು ಗಿಡಕ್ಕೆ ನೀರು ಹಾಕುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.

ವಿಶೇಷ ಅತಿಥಿಯಾಗಿ ಆಗಮಿಸಿದ್ದ ಸುರತ್ಕಲ್‌ನ NITK ಕಾಲೇಜಿನ CSE ವಿಭಾಗದ ಸಹ ಪ್ರಾಧ್ಯಾಪಕ ಡಾ. ಮೋಹಿತ್ ಪಿ.ತಹಿಲಿಯಾನಿ, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಯೇತರಿಗೆ ಲಭ್ಯವಿರುವ ಔದ್ಯಮಿಕ ಅವಕಾಶಗಳ ಕುರಿತು ಮಾಹಿತಿ ನೀಡಿದರು.

ಕೆನಡಾ ಇಂಜಿನಿಯರಿಂಗ್ ಕಾಲೇಜು ಮಂಗಳೂರು ECE ವಿಭಾಗದ ಪ್ರಾಧ್ಯಾಪಕಿ ಅಶ್ವಿನಿ ಹೊಳ್ಳ ಅವರು ನೆಟ್‌ವರ್ಕಿಂಗ್ ಕ್ಷೇತ್ರದ ಮಹತ್ವವನ್ನು ವಿವರಿಸಿದರು. ಮಣಿಪಾಲದ BMESI ಕಾಲೇಜಿನ ಮಾಜಿ ಅಧ್ಯಕ್ಷ ಹಾಗೂ ಮಂಗಳೂರಿನ IEEE ಉಪ ವಿಭಾಗದ ಪ್ರಾಧ್ಯಾಪಕ ಡಾ. ಯು.ಸಿ.ನಿರಂಜನ್ ಅವರು ಎಂಬೆಡೆಡ್ ಸಿಸ್ಟಮ್ ಬಳಕೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಇಂಜಿನಿಯರಿಂಗ್ ವಿಭಾಗ ಮತ್ತು ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಭಾಗದ  ಪದವಿ ವಿದ್ಯಾರ್ಥಿಗಳು ಹಾಜರಿದ್ದರು.

Similar News