×
Ad

ಭ್ರಷ್ಟ ಸರ್ಕಾರದಿಂದ ರಸ್ತೆ ಮಾತ್ರವಲ್ಲ, ನಿಂತ ನೆಲವೇ ಕುಸಿಯಬಹುದು: ಕಾಂಗ್ರೆಸ್ ಟೀಕೆ

''ಜನರ ಪ್ರಾಣ ತೆಗೆಯಲೆಂದೇ ಬಂದ ಸ್ಯಾಂಟ್ರೋ ಸರ್ಕಾರ''

Update: 2023-01-13 12:14 IST

ಬೆಂಗಳೂರು, ಜ. 13: ಇತ್ತೀಚೆಗೆ ನಗರದಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ ಹಾಗೂ ಮಗು ಮೃತಪಟ್ಟ ಘಟನೆಯ ಬೆನ್ನಲ್ಲೇ ಬ್ರಿಗೇಡ್ ರಸ್ತೆಯಲ್ಲಿ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ದಿಢೀರ್ ರಸ್ತೆ ಕುಸಿದಿರುವುದು ರಾಜ್ಯ ಸರಕಾರದ 40% ಕಮಿಷನ್‌ಗೆ ಮತ್ತೊಂದು ಪುರಾವೆ ಎಂದು ಕಾಂಗ್ರೆಸ್ ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಗ್ರೆಸ್, ''40% ಕಮಿಷನ್‌ಗೆ ಮತ್ತೊಂದು ಪುರಾವೆ, ಮೆಟ್ರೋ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎನ್ನಲು ಪಿಲ್ಲರ್ ಕುಸಿತದ ಬೆನ್ನಲ್ಲೇ ರಸ್ತೆ ಕುಸಿತವೂ ಸಾಕ್ಷಿ ಹೇಳುತ್ತಿದೆ. ಭ್ರಷ್ಟ ಸರ್ಕಾರದಿಂದ ನಿಂತ ನೆಲವೇ ಕುಸಿಯಬಹುದು, ತಲೆ ಮೇಲಿಂದಲೂ ಸಾವು ಎರಗಬಹುದು! ಜನರ ಪ್ರಾಣ ತೆಗೆಯಲೆಂದೇ ಬಂದಿದೆ ಬಿಜೆಪಿಯ "ಸ್ಯಾಂಟ್ರೋ ಸರ್ಕಾರ" ಎಂದು ಕಿಡಿಕಾರಿದೆ. 

''ಬಿಜೆಪಿಯಲ್ಲಿ "ರವಿ"ಗಳದ್ದೇ ಕಾರುಬಾರು''

'ಬಿಜೆಪಿಯಲ್ಲಿ "ರವಿ"ಗಳದ್ದೇ ಸದ್ದು, ಗದ್ದಲ, ಕಾರುಬಾರು. ಬ್ರೋಕರ್ಸ್ ಮೋರ್ಚಾದಲ್ಲಿ - ಸ್ಯಾಂಟ್ರೋ ರವಿ, ರೌಡಿ ಮೋರ್ಚಾದಲ್ಲಿ - ಸೈಕಲ್ ರವಿ, ಕುಡುಕರ ಮೋರ್ಚಾದಲ್ಲಿ - ಲೂಟಿ ರವಿ ಈ ಮೂರು ರವಿಗಳಿಂದಲೇ ಬಿಜೆಪಿಗೆ ಬೆಳಗಾಗುತ್ತದೆ'' ಎಂದು ಕಾಂಗ್ರೆಸ್ ಟ್ವೀಟಿಸಿದೆ. 

Similar News