ಬೆಂಗಳೂರು | ಬಾಕಿ ಹಣ ಕೇಳಿದ್ದಕ್ಕೆ ಅಂಗಡಿ ಮಾಲಕ, ಆತನ ಪತ್ನಿ ಮೇಲೆ ಹಲ್ಲೆ: ಆರೋಪಿ ಸೆರೆ
Update: 2023-01-13 17:50 IST
ಬೆಂಗಳೂರು, ಜ.13: ಚಹಾ, ಸಿಗರೇಟ್ ಸಾಲ ಕೊಡಲಿಲ್ಲವೆಂದು ಅಂಗಡಿ ಮಾಲಕ ಹಾಗೂ ಆತನ ಪತ್ನಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಲ್ಮಾನ್ ಬಂಧಿತ ಆರೋಪಿಯಾಗಿದ್ದಾನೆ.ಈತ ಕೆಂಗೇರಿ ಉಪನಗರದ ಬಳಿ ಟೀ ಅಂಗಡಿ ಇಟ್ಟುಕೊಂಡಿದ್ದ ಶಿವಕುಮಾರ್ ಬಳಿ ಪ್ರತಿದಿನ ಆರೋಪಿ ಟೀ ಹಾಗೂ ಸಿಗರೇಟ್ ಸಾಲ ಪಡೆಯುತ್ತಿದ್ದ. ಜ.10 ರಂದು ಶಿವಕುಮಾರ್ ಆರೋಪಿ ಬಳಿ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಕೇಳಿದಾಗ ನನ್ನ ಬಳಿಯೇ ಹಣ ಕೇಳುತ್ತಿಯಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ಆರೋಪಿ ಕೃತ್ಯ ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ.
ಈ ಸಂಬಂಧಿಸಿದಂತೆ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಕೆಂಗೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.