ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಜ.16ರಿಂದ ಮಕ್ಕಳ ಶಸ್ತ್ರಚಿಕಿತ್ಸಾ ಶಿಬಿರ

Update: 2023-01-13 13:30 GMT

ಕೊಣಾಜೆ: ಮಂಗಳೂರು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 2023 ಜನವರಿ 16ರಿಂದ ಮತ್ತು 28 ರವರೆಗೆ ಬೆಳಿಗ್ಗೆ 9ರಿಂದ ಮದ್ಯಾಹ್ನ 1ರ ವರೆಗೆ ಮಕ್ಕಳ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಉಚಿತವಾಗಿ ನೋಂದಾವಣೆ ಮತ್ತು ಸಮಾಲೋಚನೆ, ಎಕ್ಸರೇ, ಅಲ್ಟ್ರಾಸೌಂಡ್ ಸ್ಕ್ಯಾನ್ ಮತ್ತು ರಿಯಾಯಿತಿಯೊಂದಿಗೆ ಅವಶ್ಯವಿರುವ ರಕ್ತದ ಪರೀಕ್ಷೆ, ರೇಡಿಯೋಲಜಿ ಪರೀಕ್ಷೆ, ಶಸ್ತ್ರಕ್ರಿಯೆಗಳನ್ನು ಮಾಡಲಾಗುವುದು.

ನವಜಾತ ಶಿಶುಗಳಿಂದ ಹಿಡಿದು ಸುಮಾರು 18 ವಯಸ್ಸಿನವರೆಗಿನ ಮಕ್ಕಳು ಈ ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆ ತಿಳಿಸಿದೆ.  

Similar News