×
Ad

ಆಹಾರ ಕ್ರಮದಲ್ಲಿ ರಾಜಕೀಯ ಅಜೆಂಡಾಗಳೇಕೆ: ಡಾ.ಸಿಲ್ವಿಯಾ ಕರ್ಪಗಮ್ ಪ್ರಶ್ನೆ

Update: 2023-01-13 22:28 IST

ಬೆಂಗಳೂರು, ಜ.13: ಆಹಾರ ಕ್ರಮದಲ್ಲಿ ಯಾವುದೇ ರಾಜಕೀಯ ಅಜೆಂಡಾಗಳು ಹಸ್ತಕ್ಷೇಪ ಮಾಡಬಾರದು. ಮನುಷ್ಯ ವೈಜ್ಞಾನಿಕವಾಗಿ ತನಗೆ ಇಷ್ಟವಾದ ಪೌಷ್ಠಿಕಾಂಶಯುವ ಆಹಾರವನ್ನು ಸೇವಿಸಬೇಕು ಎಂದು ಸಾರ್ವಜನಿಕ ಆರೋಗ್ಯ ತಜ್ಞೆ ಡಾ.ಸಿಲ್ವಿಯಾ ಕರ್ಪಗಮ್ ತಿಳಿಸಿದ್ದಾರೆ. 

ಶುಕ್ರವಾರ ‘ಆಹಾರ ನಮ್ಮ ಹಕ್ಕು’ ಎಂಬ ವರ್ಚುವಲ್ ಚರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಇಂದು ಬ್ರಾಹ್ಮಣ್ಯಿಕ ಆಹಾರ ಪದ್ಧತಿಯನ್ನು ಹೇರಿಕೆ ಮಾಡಲಾಗುತ್ತಿದೆ. ಜಾತಿ ಆಧಾರಿತ ಆಹಾರ ತಾರತಮ್ಯ ದೇಹಕ್ಕೆ ಮಾರಕವಾಗಿದ್ದು, ಆಹಾರ ಸೇವನೆ ಮನುಷ್ಯನ ಜನ್ಮಸಿದ್ಧ ಹಕ್ಕು. ಸಸ್ಯಹಾರವಾಗಲಿ, ಮಾಂಸಹಾರವಾಗಲಿ ವೈಜ್ಞಾನಿಕ ಆಧಾರದಲ್ಲಿ ಸೇವಿಸುವುದು ಸೂಕ್ತ ಎಂದು ಹೇಳಿದರು.

ಚರ್ಚೆಯಲ್ಲಿ ಲೇಖಕರುಗಳಾದ ಪುರುಷೋತ್ತಮ ಬಿಳಿಮಲೆ, ನಾ. ದಿವಾಕರ, ಲಕ್ಷ್ಮಿ ನಾರಾಯಣ್, ಅನಿಲ್ ಡಿಸೋಜಾ, ವನಜಾ ವಿ., ಯಧುರ್ ಮಹಾಬಲ ಮುಂತಾದವರು ಇದ್ದರು.

Similar News