ರ‍್ಯಾಪಿಡ್ ರಸ್ತೆ ಮೌಲ್ಯಮಾಪನ: ಐಐಎಸ್‍ಸಿಯೊಂದಿಗೆ ಬಿಬಿಎಂಪಿ ಮಾತುಕತೆ

Update: 2023-01-13 18:23 GMT

ಬೆಂಗಳೂರು, ಜ.13: ರ್ಯಾಪಿಡ್ ರಸ್ತೆಯನ್ನು ಮೌಲ್ಯಮಾಪನಕ್ಕೆ ಅಳವಡಿಸಲು ಕ್ರಮ ವಹಿಸಲಾಗುತ್ತಿದ್ದು, ಇಂಡಿಯನ್ ಇನ್‍ಸ್ಟಿಟ್ಯೂಷನ್ ಆಫ್ ಸೈನ್ಸ್(ಐಐಎಸ್‍ಸಿ) ಜತೆಗೆ ಮಾತುಕತೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಹಂತದಲ್ಲಿ ರ್ಯಾಪಿಡ್ ರಸ್ತೆಯನ್ನು ಪರಿಶೀಲಿಸಲಾಗುತ್ತದೆ. ಈ ಕುರಿತು ಐಐಎಸ್‍ಸಿ ಸಂಸ್ಥೆಯೊಂದಿಗೆ ಹಣಕಾಸಿನ ವಿಚಾರವಾಗಿ ಚರ್ಚೆ ಆಗುತ್ತಿದೆ. ಸಂಸ್ಥೆಯು ರ್ಯಾಪಿಡ್ ರಸ್ತೆಯ ಕುರಿತು ನೀಡುವ ಅಂತಿಮ ವರದಿಯಲ್ಲಿನ ಗುಣ-ದೋಷಗಳನ್ನು ಪರಿಶೀಲಿಸಲಿಸಿ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ಬಿಬಿಎಂಪಿ ಅನುದಾನ ಮತ್ತು 15ನೆ ಹಣಕಾಸಿನ ಯೋಜನೆಯಡಿ ಕಸ ಗುಡಿಸುವ ಯಂತ್ರಗಳನ್ನು(ಸ್ವೀಪಿಂಗ್ ಮಿಷನ್) ಖರೀದಿ ಮಾಡಲಾಗುತ್ತಿದೆ. ಎಲ್ಲ ನಗರಗಳಲ್ಲಿ ಯಂತ್ರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯಲ್ಲಿ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಸಂದರ್ಭದಲ್ಲಿ ಮೀಸಲಿಟ್ಟ ಹಣ ಹಾಗೂ ಯಂತ್ರಗಳ ಸಂಖ್ಯೆಯನ್ನು ಬಹಿರಂಗ ಪಡಿಸಲಾಗುವುದು ಎಂದು ಅವರು ತಿಳಿಸಿದರು.

Similar News