ದೇಶದಲ್ಲಿ ಅಲ್ಪಸಂಖ್ಯಾತರ ಪಾತ್ರ ಕಡಿಮೆಗೊಳಿಸಲು CAA ಜಾರಿ: ನೊಬೆಲ್‌ ಪುರಸ್ಕೃತ ಅಮರ್ತ್ಯ ಸೇನ್

ಅಲ್ಪಸಂಖ್ಯಾತರ ಅವಗಣನೆಗೆ ಮುಂದೊಂದು ದಿನ ಭಾರತ ವಿಷಾದಿಸಬೇಕಾದೀತು ಎಂದ ಅರ್ಥಶಾಸ್ತ್ರಜ್ಞ

Update: 2023-01-14 12:54 GMT

ಕೊಲ್ಕತ್ತಾ: ಪೌರತ್ವ ತಿದ್ದುಪಡಿ ಕಾಯಿದೆಯ (CAA) ಜಾರಿಯು ದೇಶದಲ್ಲಿ ಅಲ್ಪಸಂಖ್ಯಾತರ ಪಾತ್ರವನ್ನು ಕಡಿಮೆಗೊಳಿಸಬಹುದು ಹಾಗೂ ಬಹುಸಂಖ್ಯಾತ ಶಕ್ತಿಗಳನ್ನು ಪ್ರೋತ್ಸಾಹಿಸಬಹುದು ಎಂದು ನೊಬೆಲ್‌ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ (Amartya Sen) ಅಭಿಪ್ರಾಯ ಪಟ್ಟಿದ್ದಾರೆ.

"ನನಗೆ ತಿಳಿದ ಮಟ್ಟಿಗೆ  ಸಿಎಎ ಜಾರಿಯ ಹಿಂದಿನ ಬಿಜೆಪಿಯ ಉದ್ದೇಶಗಳಲ್ಲೊಂದು ಅಲ್ಪಸಂಖ್ಯಾತರ ಪಾತ್ರವನ್ನು ಕಡಿಮೆಗೊಳಿಸುವುದು ಹಾಗೂ ನೇರ ಮತ್ತು ಪರೋಕ್ಷ ವಿಧಾನದಲ್ಲಿ ಹಿಂದು ಬಹುಸಂಖ್ಯಾತ ಶಕ್ತಿಗಳ ಪಾರಮ್ಯ ಹೆಚ್ಚಿಸಿ ಆ ಮೂಲಕ ಅಲ್ಪಸಂಖ್ಯಾತರನ್ನು ಕಡೆಗಣಿಸುವುದಾಗಿದೆ," ಎಂದು ಸೇನ್‌ ಹೇಳಿದ್ದಾರೆ.

"ಜಾತ್ಯತೀತ ಹಾಗೂ ಸಮಾನತೆಯ ದೇಶವಾಗಿರುವ ಭಾರತದಲ್ಲಿ ಇಂತಹ ಒಂದು ಕ್ರಮ ಸರಿಯಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಕಾರ್ಯನಿರ್ವಹಣೆ ಸುಧಾರಿಸಿಲ್ಲ. ಪ್ರತಿಯೊಬ್ಬ ನಾಗರಿಕನಿಗೆ ಕೆಲವೊಂದು ಹಕ್ಕುಗಳಿವೆ ಹಾಗೂ ಅವು ಅವರು ಈ ದೇಶದ ನಾಗರಿಕರಾಗಿರುವುದಿಂದ ಲಭ್ಯವಿದೆ ಎಂಬ ಅರಿವಿರಬೇಕು. ಮಹಾತ್ಮ ಗಾಂಧಿ ಕೂಡ ಮಾಡಲೆತ್ನಿಸಿದ್ದು ಇದನ್ನೇ. ಓರ್ವ ಹಿಂದು ಆಗಿದ್ದುಕೊಂಡು ಅವರು ಮುಸ್ಲಿಮರಿಗೆ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿಯೇ ಪ್ರಾಮುಖ್ಯತೆ ನೀಡಿದ್ದರು, ಅದು ಉತ್ತಮ ಸಂಸ್ಕೃತಿಯಾಗಿತ್ತು. ಆದರೆ ಈಗ ಅಲ್ಪಸಂಖ್ಯಾತರ ಅವಗಣನೆಗೆ ಮುಂದೊಂದು ದಿನ ಭಾರತ ವಿಷಾದಿಸಬೇಕಾದೀತು," ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: 'ಪಠಾಣ್' ಬೆಂಬಲಕ್ಕೆ ನಿಂತ ದಕ್ಷಿಣದ ತಾರೆಯರು: ಬಾಯ್ಕಾಟ್ ಬಾಲಿವುಡ್ ಎಂದವರಿಗೆ ತೀವ್ರ ಮುಜುಗರ

Similar News