ಬಂಟ್ವಾಳ: ಅನುಗ್ರಹ ಮಹಿಳಾ ಕಾಲೇಜು ವತಿಯಿಂದ ಸಾಧಕರಿಗೆ ಸನ್ಮಾನ

Update: 2023-01-14 18:33 GMT

ಬಂಟ್ವಾಳ: ದ್ವ- ದಶಮಾನೋತ್ಸವದ ಆಚರಣೆಗಳ ಸಂಭ್ರಮದಲ್ಲಿರುವ ಅನುಗ್ರಹ ಮಹಿಳಾ ಕಾಲೇಜು ಗೋಳ್ತಮಜಲು ಕಲ್ಲಡ್ಕ ಇದರ ಟ್ರಸ್ಟ್  ವತಿಯಿಂದ ದೇಶ ಮತ್ತು ವಿದೇಶಗಳಲ್ಲಿ ವಿಶಿಷ್ಟ ಸೇವೆಗೈದ (ಕನ್ನಡಿಗರಿಗೆ) ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ಕೆಲವು ಗಣ್ಯ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. 

ಬೀದರಿನ ಪ್ರತಿಷ್ಠಿತ ' ಶಾಹೀನ್ ' ವಿದ್ಯಾ ಸಂಸ್ಥೆಗಳ ರೂವಾರಿ ಡಾ. ಅಬ್ದುಲ್ ಖದೀರ್  ಸಾಹೇಬ್, ಶೈಕ್ಷಣಿಕ, ಅರೋಗ್ಯ ಕ್ಷೇತ್ರದಲ್ಲಿ ಸಾಮಾಜಿಕ ಸೇವಾ ರಂಗದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ಎಂಜಿನಿಯರ್ ಮುಹಮ್ಮದ್ ಇಬ್ರಾಹಿಂ,  ಪ್ರೊಫೆಸರ್ ಅಬ್ದುಲ್ ರಹ್ಮಾನ್ ಬೇಗ್, ಪಿಎಂಜೆಫ್-ಲಯನ್ ಡಾ.ಇಬ್ರಾಹಿಮ್ ಹಾಜಿ ಕಲ್ಲೂರ್, ಅಂಕಣಗಾರ್ತಿ, ಅನುಪಮ ಮಾಸಿಕದ ಸಂಪಾದಕಿ ಹಾಗೂ ಆಸರೆ ಫೌಂಡೇಶನ್ ಇದರ ಕೌನ್ಸಿಲರ್ ಮಂಗಳೂರಿನ ಶಹನಾಜ್ ಎಂ. ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಂತಿ ಪ್ರಕಾಶನದ ಉಪಾಧ್ಯಕ್ಷರಾದ ಕೆ. ಎಂ. ಶರೀಫ್ , ಮುಹಮ್ಮದ್ ಶಾಹಿದ್- ಸಮನ್ವಯ ಶಿಕ್ಷಕರ ಸಂಘ, ಹಂಝ ಯು. ಎನ್. - AITA,  ಯಹ್ಯಾ ತಂಙಳ್, ಅಬ್ದುಸ್ಸಲಾಮ್ ಉಪ್ಪಿನಂಗಡಿ- JIH , ಹನೀಫ್ ಹಾಜಿ ಗೋಳ್ತಮಜಲು, ಇಜಾಝ್ ಅಹ್ಮದ್ ಮತ್ತು ಇಪ್ತಿಕಾರ್ ಅಹ್ಮದ್ ಖಾನ್(ಅಲ್ ಹಬೀಬ್ ಎಜುಕೇಶನ್ ಟ್ರಸ್ಟ್,ಶಿವಮೊಗ್ಗ) ಸುಲೈಮಾನ್ B.S., ಆಡಳಿತ ಮಂಡಳಿಯ ಅಧ್ಯಕ್ಷರಾದ ಜನಾಬ್ ಯಾಸೀನ್ ಬೇಗ್, ಸಂಚಾಲಕ ಅಮಾನುಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿಯಾದ ಶಾಹುಲ್ ಹಮೀದ್, ಜೊತೆ ಕಾರ್ಯದಶಿಯಾದ ಸುಲೈಮಾನ್ ಅಪೋಲೋ, ಕೋಶಾಧಿಕಾರಿ ಹೈದರ್ ಅಲಿ ನೀರ್ಕಜೆ,  ಸದಸ್ಯರುಗಳಾದ ಅಮೀನ್ ಅಹ್ಸನ್, ಅಬ್ದುಲ್ಲ ಕುಂಞಿ, ಅಬ್ದುಲ್ಲ ಚೆಂಡಾಡಿ, ಶ್ರೀಯುತ ಇಬ್ರಾಹಿಂ ಚೆಂಡಾಡಿ, ಮುಖ್ತಾರ್ ಅಹಮ್ಮದ್, ಕಾಲೇಜಿನ ಪ್ರಾಂಶುಪಾಲೆ ಹೇಮಲತ ಬಿ.ಡಿ. ಮತ್ತು ಸಲಹಾ ಸಮಿತಿ ಕಾರ್ಯದರ್ಶಿ ಮಮಿತಾ ಎಸ್ . ರೈ ಉಪಸ್ಥಿತರಿದ್ದರು.

Similar News