ಮಂಗಳೂರು: ಜ.27-28 ರಂದು 'ಫಿಶ್ ಫೆಸ್ಟಿವಲ್'

Update: 2023-01-18 15:50 GMT

ಮಂಗಳೂರು, ಜ.18: ನಗರದ ಮೀನುಗಾರಿಕಾ ಕಾಲೇಜು, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಯ ಸಹಯೋಗದಲ್ಲಿ ಮೀನುಗಾರಿಕಾ ಕಾಲೇಜಿನ ಆವರಣದಲ್ಲಿ  ಜ.27 ಮತ್ತು 28ರಂದು ಬೆಳಗ್ಗೆ 10ರಿಂದ ಸಂಜೆಯವರೆಗೆ ಫಿಶ್ ಫೆಸ್ಟಿವಲ್-2023 ಆಯೋಜಿಸಲಾಗಿದೆ.

ಜ.27ರ ಸಂಜೆ 5ಕ್ಕೆ ಮೀನುಗಾರಿಕಾ ಸಚಿವ ಎಸ್. ಅಂಗಾರ ಫಿಶ್ ಫೆಸ್ಟಿವಲ್ ಉದ್ಘಾಟಿಸುವರು.

ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಕೆ.ಸಿ. ವೀೀರಣ್ಣ,  ವಿವಿಯ ವಿಸ್ತರಣಾ ನಿರ್ದೇಶಕ ಡಾ.ಎನ್.ಎ. ಪಾಟೀಲ್, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಯ ಸಿಇಒ ಡಾ.ಸುವರ್ಣ, ರಾಜ್ಯ ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಾಚಾರ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.

Similar News