ಬೆಂಗಳೂರು: ಎಮ್ಮೆಗಳ ವಿರುದ್ಧ ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ ಇಂಜಿನಿಯರ್‌ಗಳು!

Update: 2023-01-22 13:39 GMT

ಬೆಂಗಳೂರು,ಜ.22: ಎಮ್ಮೆಗಳು ತೊಂದರೆ ಕೊಡುತ್ತಿವೆ ಎಂದು ನಗರದಲ್ಲಿ ಎಮ್ಮೆಗಳ ವಿರುದ್ಧ ಸಾಫ್ಟ್‌ವೇರ್ ಇಂಜಿನಿಯರ್‌ಗಳು ದೂರು ನೀಡಿರುವ ಘಟನೆ ನಡೆದಿದೆ. 

ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಬೆಳಿಗ್ಗೆ ಕಚೇರಿಗೆ ಹೋಗುವಾಗ ನಗರದ ಕಸವನಹಳ್ಳಿ ರಸ್ತೆಯಲ್ಲಿ ಪ್ರತಿನಿತ್ಯ ಎಮ್ಮೆಗಳು ಸರತಿ ಸಾಲಿನಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತಾ ರೋಡ್‌ನಲ್ಲಿ ಹೋಗುತ್ತಿವೆ. ಇದರಿಂದ ದಿನನಿತ್ಯ 45 ನಿಮಿಷ ಟ್ರಾಫಿಕ್ ಜಾಮ್ ಆಗುತ್ತಿದ್ದು, ಟೆಕ್ಕಿಗಳು ಹೈರಾಣಾಗಿ ಹೋಗಿದ್ದಾರೆ.

ಈ ಹಿನ್ನೆಲೆ ಬಹುರಾಷ್ಟ್ರೀಯ ಕಂಪನಿಯ ಟೆಕ್ಕಿಗಳು ಕಳೆದ 6-7 ತಿಂಗಳಿಂದ ಎಮ್ಮೆ ಸಮ್ಯಸೆಯಿಂದ ಟ್ರಾಫಿಕ್ ಜಾಮ್ ಆಗಿ ಕಚೇರಿಗೆ ನಿತ್ಯ ತಡವಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟ್ವೀಟರ್‌ನಲ್ಲಿ ಸಂಚಾರ ಪೊಲೀಸ್ ಸೇರಿದಂತೆ ಶಾಸಕ ಅರವಿಂದ ಲಿಂಬಾವಲಿ, ಪಶುಸಂಗೋಪನಾ ಇಲಾಖೆ,  ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

Similar News