ಪ್ರಜಾಧ್ವನಿ ರಾಜ್ಯದ ವಿಕಾಸಕ್ಕೆ ಹಾದಿ: ರಣದೀಪ್ ಸಿಂಗ್ ಸುರ್ಜೆವಾಲಾ

ಮಂಗಳೂರಿನಲ್ಲಿ ಪ್ರಜಾಧ್ವನಿ ಯಾತ್ರೆ

Update: 2023-01-22 19:37 GMT

ಮಂಗಳೂರು,ಜ.22: ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆಯು ರಾಜ್ಯವನ್ನು ವಿಕಾಸದ ಹಾದಿಯಲ್ಲಿ ಮುನ್ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಪ್ರಜಾಧ್ವನಿ ಸಮಾವೇಶದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವrರು, ಬಿಜೆಪಿ ಕರ್ನಾಟಕವನ್ನು ಭೃಷ್ಟಾಚಾರ, ಕಮಿಷನ್, ಕೋಮುವಾದದ ಕಾರ್ಖಾನೆಯನ್ನಾಗಿ ಮಾಡಲು ಹೊರಟಿದೆ ಎಂದು ಟೀಕಿಸಿದರು.

ಭಾರತದ ಸನಾತನದ ಧರ್ಮ ವಿಶ್ವವೇ ಒಂದು ಕುಟುಂಬ ಎಂದು ಹೇಳಿದೆ.ಆದರೆ ಬಿಜೆಪಿ ಅದಕ್ಕೆ ವಿರುದ್ಧ ವಾಗಿ ಹಿಂದುತ್ವವನ್ನು ಮುಂದಿ ಟ್ಟು ಕೋಮುವಾದದ ರಾಜಕೀಯ ಮಾಡುತ್ತಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವ್ಯತ್ಯಾಸವಾಗಿದೆ ಎಂದು ಸುರ್ಜೆವಾಲ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಹಿಸಿ ಮಾತನಾಡುತ್ತಾ, ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಹಾಗೂ ಜನರಿಗೆ ನೆಮ್ಮದಿಯ ಬದುಕು ನೀಡುವ ಮುಖ್ಯ ಗುರಿಯನ್ನು ಕಾಂಗ್ರೆಸ್ ಪಕ್ಷ ಹೊಂದಿದೆ.ಈ ನಿಟ್ಟಿನಲ್ಲಿ ತನ್ನ ಪ್ರಣಾಳಿಕೆ ಯಲ್ಲಿ ನೀಡಿರುವ ಎಲ್ಲಾ ಘೋಷಣೆಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ಜಾರಿ ಮಾಡುವ ಬದ್ಧತೆ ಯನ್ನು ಪಕ್ಷ ಹೊಂದಿದೆ ಎಂದವರು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತಾ,ಕಾಂಗ್ರೆಸ್ ಈಡೇರಿಸಲು ಸಾಧ್ಯ ವಾಗುವ ಭರವಸೆ ನೀಡುತ್ತಾ ಬಂದಿದೆ. ಸುಳ್ಳು ಭರವಸೆ ನೀಡುವುದಿಲ್ಲ.ನಾವು ಅಧಿಕಾರಕ್ಕೆ ಬಂದಾಗ ನೀಡಿದ ಎಲ್ಲಾ ಭರವಸೆ ಈಡೇರಿಸಿದೆ. ಭರವಸೆ ನೀಡದೆ ಇರುವ 30ಯೋಜನೆ ಗಳನ್ನು ಜಾರಿ ಮಾಡಿದೆ. ಬಿಜೆಪಿ ನೀಡಿದ 600, ಭರವಸೆಗಳಲ್ಲಿ ಶೇ 10ನ್ನು ಈಡೇರಿಸಿಲ್ಲ ಎಂದರು.

ಕಾಂಗ್ರೆಸ್ ಜನರನ್ನು ಒಟ್ಟು ಗೂಡಿಸುತ್ತದೆ. ರಾಹುಲ್ ಗಾಂಧಿ ಈ ನಿಟ್ಟಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಕರಾವಳಿ ಜನತೆಗೆ ಕಾಂಗ್ರೆಸ್ ನ ಬದ್ಧತೆ ಯ ಬಗ್ಗೆ ನಂಬಿಕೆ ಇದೆ ಬೆಂಬಲಿಸುತ್ತೀರಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು.

ವಿಧಾನ ಸಭಾ ವಿಪಕ್ಷ ಉಪ ನಾಯಕ ಯು ಟಿ.ಖಾದರ್ ಪ್ರಸ್ತಾವಿಕ ಮಾತನಾಡಿ , ಈ ಪ್ರಜಾಧ್ವನಿಯಾತ್ರೆ ಕೇವಲ ಯಾತ್ರೆ ಯಲ್ಲ,ಬಿಜೆಪಿಯ ನ್ನು ಕಿತ್ತೊಗೆಯಲು,ಗಾಂಧಿ ಅಂಬೇಡ್ಕರ್ ಕನಸಿನ ಸರಕಾರ ರಚನೆಗೆ ನಡೆಸುವ ಯಾತ್ರೆ ಎಂದರು.

► ಸಮಾವೇಶದಲ್ಲಿ ಧುರೀಣರ ಅನಿಸಿಕೆ

-ಮನೆ ಮನೆಗೆ ಹೋಗಿ ಪಕ್ಷದ ಸಾಧನೆಗಳ ಬಗ್ಗೆ ತಿಳಿಸಬೇಕಾಗಿದೆ ಬಿಜೆಪಿ ಆಡಳಿತ ಕೊನೆಗಾಣಿಸಬೇಕಾಗಿದೆ

-ಮಾಜಿ ಶಾಸಕ ಜೆ.ಆರ್.ಲೋಬೊ.

- ಕರಾವಳಿಯ ಸೌಹಾರ್ದತೆಯ ಗತ ಚರಿತ್ರೆಯನ್ನು ನೆನಪಿಸಬೇಕಾಗಿದೆ ಮಾನವೀಯ ಮೌಲ್ಯಗಳ ಬಗ್ಗೆ ಹೇಳ ಬೇಕಾಗಿದೆ.

-ಭರತ್ ಮುಂಡೋಡಿ.

-ಜಿಲ್ಲೆಯ ಜನರ ನಡುವೆ ದ್ವೇಷ ಭಾವನೆ ಮೂಡಿಸಿ ಬಿಜೆಪಿ ಸಮಾಜವನ್ನು ಒಡೆದು ರಾಜಕೀಯ ಮಾಡುತ್ತಾ,ಜಿಲ್ಲೆಯ ಅಭಿವೃದ್ಧಿಗೆ ಸಾಮರಸ್ಯಕ್ಕೆ ತೊಡಕಾಗಿದೆ. ಈ ವಾತಾವರಣ ಬದಲಾಗಬೇಕಾಗಿದೆ ಬಿಜೆಪಿ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಯನ್ನಾಗಿ ಮಾಡುವ ಸಂಕಲ್ಪ ಮಾಡಬೇಕಾಗಿದೆ.

-ಮಿಥುನ್ ರೈ.

-ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಪ್ರಣಾಳಿಕೆ ಯಲ್ಲಿನೀಡಿದ ಎಲ್ಲಾ ಯೋಜನೆ ಗಳನ್ನು ಜಾರಿ ಮಾಡಿದೆ.

-ಐವನ್ ಡಿ ಸೋಜ.

-ಸೌಹಾರ್ದ ತೆಯ ಪರಂಪರೆಯ ಕರಾವಳಿ ಯಲ್ಲಿ ಕೋಮುವಾದಿಗಳು ಮೆರೆಯಲು ಪರೋಕ್ಷವಾಗಿ ನಾವು ಕಾರಣರಾ ಗಿದ್ದೇವೆ. ಬಿಜೆಪಿ ಹಿಂಬಾಗಿಲಿನಿದ ಬಂದು ರಾಜ್ಯದಲ್ಲಿ ಆಡಳಿತ ಹಿಡಿದಿದೆ.

-ಪ್ರೊ.ರಾಧಾಕೃಷ್ಣ.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ,ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ಮುಖಂಡರಾದ ಮಧು ಬಂಗಾರಪ್ಪ, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ,ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್,ಮಾಜಿ ಸಂಸದ ಜಿ.ಸಿ. ಚಂದ್ರಶೇಖರ್ ,ಯುವ ಮುಖಂಡ ರಾದ ಕೀರ್ತಿ ಗಣೇಶ್, ನಿವೇದಿತಾ, ರಘನಂದನ್ ,ಮಾಜಿ ಸಂಸದ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್ ಮಾಜಿ ಶಾಸಕ ರಾದ ಗಂಗಾ ಧರ ಗೌಡ,ಜೆ.ಆರ್. ಲೋಬೊ,ಶಕುಂತಲಾ ಶೆಟ್ಟಿ, ಮೊಹಿಯುದ್ಧೀನ್ ಬಾವ,ಐವನ್ ಡಿ ಸೋಜ, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮುಖಂಡ ರಾದ ಶಾಲೆಟ್ ಪಿಂಟೋ,ಕಣಚೂರು ಮೋನು, ಶಶಿಧರ ಹೆಗ್ಡೆ ,ಇನಾಯತ್ ಅಲಿ, ಕೃಪಾ ಅಮರ್ ಆಳ್ವ,ಪಿ.ವಿ.ಮೋಹನ್, ಮೊದಲಾದವರು ಉಪಸ್ಥಿತರಿದ್ದರು.

ದ.ಕ ಜಿಲ್ಲಾ ಕಾಂಗ್ರೆ ಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ವಾಗತಿಸಿದರು.ಮಮತಾ ಗಟ್ಟಿ,ಮುಹಮ್ಮದ್ ಬಡಗನ್ನೂರು ಕಾರ್ಯ ಕ್ರಮ ನಿರೂಪಿಸಿದರು.ಶಾಹುಲ್ ಹಮೀದ್ ವಂದಿಸಿದರು 

ಸೇರ್ಪಡೆ: ಪುತ್ತೂರಿನ ಉದ್ಯಮಿ, ಬಿಜೆಪಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ , ಬಿಜೆಪಿಯ ಮಾಜಿ ಜಿಪಂ ಸದಸ್ಯ ಫಕೀರ ಅವರ ಪತ್ನಿ ಧರಣಿ ಫಕೀರ ಮತ್ತು ಎಂ.ಜಿ.ಹೆಗ್ಡೆ ಕಾಂಗ್ರೆಸ್ ಪಕ್ಷಕ್ಕೆ ಹಲವಾರು ಬೆಂಬಲಿಗರೊಂದಿಗೆ ಸೇರ್ಪಡೆಯಾದರು.

Full View

Similar News