ರಾಜ್ಯದ ಪರ ಕಾನೂನು ತಜ್ಞರ ತಂಡಕ್ಕೆ ದಿನವೊಂದಕ್ಕೆ 59. 90 ಲಕ್ಷ ರೂ. ವೃತ್ತಿ ಶುಲ್ಕ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ

Update: 2023-01-23 03:58 GMT

ಬೆಂಗಳೂರು, ಜ.22: ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಕಿಡಿ ಹೊತ್ತಿಸಿ ಸಂಘರ್ಷಕ್ಕೆ ಕಾರಣವಾಗುತ್ತಿರುವ ಗಡಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿರುವ ಅಸಲುದಾವೆ ಸಂಬಂಧ ರಾಜ್ಯದ ಪರವಾಗಿ ಪ್ರತಿನಿಧಿಸಲು ರಚನೆಯಾಗಿರುವ ದೇಶದ ಅಟಾರ್ನಿ ಜನರಲ್ ಆಗಿದ್ದ ಮುಕುಲ್ ರೋಹಟಗಿ, ರಾಜ್ಯದ ಅಡ್ವೊಕೇಟ್ ಜನರಲ್ ಸೇರಿದಂತೆ ಮತ್ತಿತರರ ಕಾನೂನು ತಜ್ಞರ ತಂಡಕ್ಕೆ ದಿನವೊಂದಕ್ಕೆ 59.90 ಲಕ್ಷ ರೂ. ವೃತ್ತಿ ಶುಲ್ಕವನ್ನು ರಾಜ್ಯವು ಭರಿಸಲಿದೆ.

ಈ ಕುರಿತು 2023ರ ಜನವರಿ 18ರಂದು ಕಾನೂನು ಇಲಾಖೆಯು (ಓಔ.ಐಂW 319 ಐSP 2022 ಃಇಓಉಂಐUಖU, ಆಂಖಿಇಆ 18.01.2023 ) ಆದೇಶ ಹೊರಡಿಸಿದೆ. ಇದರ ಪ್ರತಿಯು ‘ಣhe-ಜಿiಟe.iಟಿ’ಗೆ ಲಭ್ಯವಾಗಿದೆ. 
ಹಿಜಾಬ್ ಪ್ರಕರಣದಲ್ಲಿಯೂ ದೇಶದ ಸಾಲಿಸಿಟರ್ ಜನರಲ್ ಮತ್ತು ಅಡಿಷನಲ್ ಸಾಲಿಸಿಟರ್ ಜನರಲ್ ಅವರಿಗೆ 88 ಲಕ್ಷ ರೂ. ವೃತ್ತಿ ಶುಲ್ಕ ಭರಿಸಲು ಶಿಕ್ಷಣ ಇಲಾಖೆಯು ಪ್ರಸ್ತಾವ ಸಲ್ಲಿಸಿದ್ದರ ಬೆನ್ನಲ್ಲೇ ಗಡಿ ವಿವಾದದ ಕುರಿತು ಅಸಲುದಾವೆ (ಔ.S.ಓಔ 4/2004) ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕಾನೂನು ತಜ್ಞರ ತಂಡಕ್ಕೆ ದಿನವೊಂದಕ್ಕೆ 59 ಲಕ್ಷ ರೂ. ವೃತ್ತಿಪರ ಶುಲ್ಕ ಪಾವತಿಸಲು ಕಾನೂನು ಇಲಾಖೆ ಹೊರಡಿಸಿರುವ ಆದೇಶವು ಮುನ್ನೆಲೆಗೆ ಬಂದಿದೆ. ಎರಡನೇ ಬಾರಿಗೆ ದೇಶದ ಅಟಾರ್ನಿ ಜನರಲ್ ಆಗಿರುವ ಮುಕುಲ್ ರೋಹಟಗಿ, ಹಿರಿಯ ವಕೀಲ ಶ್ಯಾಮ್ ದಿವಾನ್, ರಾಜ್ಯದ ಅಡ್ವೊಕೇಟ್ ಜನರಲ್, ರಾಜ್ಯದ ಹಿರಿಯ ವಕೀಲ ಉದಯ ಹೊಳ್ಳ, ಮಾರುತಿ ಬಿ. ಝಿರಲಿ, ವಿ.ಎನ್. ರಘುಪತಿ ಅವರನ್ನೊಳಗೊಂಡ ಕಾನೂನು ತಜ್ಞರ ತಂಡವನ್ನು ರಾಜ್ಯ ಸರಕಾರವು ರಚಿಸಿದೆ. 
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಸುವ ಮುಕುಲ್ ರೋಹಟಗಿ ಅವರಿಗೆ 22,00,000 ರೂ. ಮತ್ತು ಪ್ರಕರಣದ ಕುರಿತು ಕಾನ್ಫ್
ರೆನ್ಸ್ ಮತ್ತಿತರ ಕೆಲಸಗಳಿಗೆ 5,50,000 ರೂ. ಸೇರಿ ಒಟ್ಟು 27 ಲಕ್ಷ ರೂ.ಗಳನ್ನು ದಿನವೊಂದಕ್ಕೆ ವೆಚ್ಚವಾಗಲಿದೆ.
ಶ್ಯಾಮ್ ದಿವಾನ್ ಅವರಿಗೆ ಪ್ರತೀ ವಿಚಾರಣೆಗೆ 6,00,000 ರೂ., ಕಾನ್ಫರೆನ್ಸ್ ಮತ್ತಿತರ ಕೆಲಸಗಳಿಗೆ 1,50,000 ರೂ., ಹೊಸದಿಲ್ಲಿ ಹೊರತುಪಡಿಸಿ ಹೊರಸ್ಥಳಗಳ ಭೇಟಿಗೆ 10,00,000 ರೂ. ಸೇರಿ ಒಂದು ದಿನಕ್ಕೆ 17.50 ಲಕ್ಷ ರೂ. ರಾಜ್ಯದ ಅಡ್ವೊಕೇಟ್ ಜನರಲ್ ಅವರಿಗೆ 3,00,000 ರೂ., ಕಾನ್ಫರೆನ್ಸ್ ಇನ್ನಿತರ ಕೆಲಸಗಳಿಗೆ 1,25,000 ರೂ., ಬೆಂಗಳೂರು ಹೊರತುಪಡಿಸಿ ಹೊರ ಸ್ಥಳಕ್ಕೆ ಭೇಟಿಗಾಗಿ 2,00,000 ರೂ. ಸೇರಿದಂತೆ ದಿನವೊಂದಕ್ಕೆ 6.25 ಲಕ್ಷ ರೂ., ಮತ್ತೊಬ್ಬ ಹಿರಿಯ ವಕೀಲ ಉದಯ ಹೊಳ್ಳ ಅವರಿಗೆ 2,00,000 ರೂ., ಕಾನ್ಫರೆನ್ಸ್ ಇನ್ನಿತರ ಕೆಲಸಗಳಿಗಾಗಿ 75,000, ಪ್ಲೀಡಿಂಗ್ ಮತ್ತಿತರ ವಿಚಾರಗಳಿಗೆ 1,50,000, ಹೊಸದಿಲ್ಲಿ ಹೊರತುಪಡಿಸಿ ಹೊರಸ್ಥಳ ಭೇಟಿಗಾಗಿ 1,50,000 ರೂ. ಸೇರಿ ದಿನವೊಂದಕ್ಕೆ 5.75 ಲಕ್ಷ ರೂ. ವೃತ್ತಿ ಶುಲ್ಕ ನಿಗದಿಪಡಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ಅದೇ ರೀತಿ ಮಾರುತಿ ಬಿ ಝಿರಲಿ ಅವರಿಗೆ 1,00,000, ಕಾನ್ಫ್‌ರೆನ್ಸ್ ಇನ್ನಿತರ ಕೆಲಸಗಳಿಗಾಗಿ 60,000 ರೂ., ಹೊಸದಿಲ್ಲಿ ಹೊರತುಪಡಿಸಿ ಹೊರಸ್ಥಳ ಭೇಟಿಗಾಗಿ 50,000 ರೂ. ಸೇರಿ ದಿನವೊಂದಕ್ಕೆ ಒಟ್ಟು 2.10 ಲಕ್ಷ ರೂ., ವಕೀಲ ವಿ.ಎನ್. ರಘುಪತಿ ಅವರಿಗೆ 35,000, ಕಾನ್ಫ್‌ರೆನ್ಸ್ ಇನ್ನಿತರ ಕೆಲಸಗಳಿಗಾಗಿ 15,000, ಹೊಸದಿಲ್ಲಿ ಹೊರತುಪಡಿಸಿ ಹೊರಸ್ಥಳ ಭೇಟಿಗಾಗಿ 30,000 ರೂ. ಸೇರಿ ದಿನವೊಂದಕ್ಕೆ 80,000 ರೂ. ಪಾವತಿಸಲು ಕಾನೂನು ಇಲಾಖೆ ಆದೇಶ ಹೊರಡಿಸಿದೆ.

Similar News