ವಿಶೇಷಚೇತನರ ಸೂಪ್ತವಾದ ಪ್ರತಿಭೆಗೆ ಪ್ರೋತ್ಸಾಹ ದೊರೆಯಲಿ: ದಿವ್ಯಾ

Update: 2023-01-24 12:17 GMT

ಬೆಂಗಳೂರು, ಜ. 23: ವಿಶೇಷಚೇತನರಿಗೆ ಅನುಕಂಪಬೇಡ, ಅವಕಾಶ ಬೇಕು. ಅವರಲ್ಲಿರುವ ಸೂಪ್ತವಾದ ಪ್ರತಿಭೆಗೆ ಪ್ರೋತ್ಸಾಹ ದೊರೆಯಬೇಕೆಂದು ಐಎಎಸ್ ಅಧಿಕಾರಿ ದಿವ್ಯಾ ಎಸ್.ಹೊಸೂರ್ ನುಡಿದರು.

ನಗರದ ಸೆಂಟ್ ಜೋಸೆಫ್ ಸಂಜೆ ಕಾಲೇಜಿನಲ್ಲಿ ಎಪಿಡಿ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ, ಯುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿಶೇಷಚೇತನ ಎಂಬ ಹಿಂಜರಿಕೆಯ ಭಾವನೆ ತೊರೆದು ಮುಂದೆ ಬರುವಲ್ಲಿಸರ್ವರ ಸಹಕಾರ ಅವರಿಗೆ ಅಗತ್ಯವಾಗಿದ್ದು, ಧೈರ್ಯ, ಪ್ರೀತಿ ಮಮಕಾರ ತುಂಬುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿಶ್ರಮಿಸಬೇಕಿದೆ ಎಂದರು.

ದೇಶದಲ್ಲಿ ಶೇ.6ರಷ್ಟು ಜನ ವಿಶೇಷ ಚೇತನರು (ವಿಕಲಾಂಗರು) ಇದ್ದು, ಪ್ರತಿಶತ 1ರಷ್ಟು ಮಂದಿ ಅನೌಪಚಾರಿಕ ಉದ್ಯೋಗವನ್ನು ಅವಲಂಬಿಸಿದ್ದಾರೆ. ಇನ್ನೂ, ಗ್ರಾಮೀಣ ಪ್ರದೇಶಗಳಲ್ಲಿ ಅಂಗವಿಕಲರಿಗೆ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸಲು, ಉತ್ತೇಜಿಸಲು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ನಾವು ಅವರ ಸಮಸ್ಯೆಗಳು, ಕಾರ್ಯತಂತ್ರ, ಆದ್ಯತೆ ಹಾಗೂ ಗುರಿಗಳನ್ನು ಪರಿಗಣಿಸಿ ಕಾರ್ಯಕ್ರಮಗಳನ್ನು ರಚಿಸಬೇಕಾಗಿದೆ ಎಂದು ಹೇಳಿದರು.

ವೈವಿಧ್ಯತೆ ಹಾಗೂ ಹೊಸ ಕಾರ್ಯಕ್ರಮ ಅಂಗವೈಕಲ್ಯ ಸಮುದಾಯಕ್ಕೆ ಕೇಂದ್ರೀಕೃತ ಅಂಶವಾಗಿದೆ. ಹೀಗಾಗಿ, ಎಪಿಡಿಯು ಹೆಚ್ಚು ಅಗತ್ಯವಿರುವ ಹಾಗೂ ರಚನಾತ್ಮಕ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ತರುವ ಕೆಲಸ ಮಾಡುತ್ತಿದೆ. ಜೊತೆಗೆ, ನಮ್ಮ ಭಾಗವಹಿಸುವಿಕೆಯ ಪ್ರಾಮುಖ್ಯತೆಯನ್ನು ಮನಗಂಡಿದ್ದೇವೆ ಎಂದು ಎಂದರು.

Similar News