ಬೆಂಗಳೂರು: ಫ್ಲೈಓವರ್ ಮೇಲಿಂದ ಹಣ ಎಸೆದ ವ್ಯಕ್ತಿ; ವೀಡಿಯೊ ವೈರಲ್

Update: 2023-01-24 12:01 GMT

ಬೆಂಗಳೂರು: ವ್ಯಕ್ತಿಯೋರ್ವ ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲಿಂದ 10 ರೂ. ಮುಖಬೆಲೆಯ ನೋಟುಗಳನ್ನು ಎಸೆದಿರುವುದಾಗಿ ವರದಿಯಾಗಿದೆ.

ಸೂಟು ಧರಿಸಿ, ಕೊರಳಿಗೆ ಗಡಿಯಾರವೊಂದನ್ನು ನೇತು ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿ, 10 ರೂ. ಮುಖಬೆಲೆಯ ನೋಟುಗಳನ್ನು ಫ್ಲೈಓವರ್ ನ ಎರಡು ಭಾಗದಲ್ಲಿ ಎಸೆದು ಹೋಗಿದ್ದಾನೆ.  

ಫ್ಲೈಓವರ್ ಮೇಲಿಂದ ಹಣ ಬೀಳುತ್ತಿದ್ದಂತೆ ಅಲ್ಲಿದ್ದವರು ಅದನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದಾರೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

Full View

Similar News