ಮಂಗಳೂರು: ಎಸ್ಕೆಎಸೆಸ್ಸೆಫ್‌ನಿಂದ ಸೌಹಾರ್ದ ಜಾಥಾ-ಮಾನವ ಸರಪಳಿ-ಸಮಾವೇಶ

Update: 2023-01-26 18:07 GMT

ಮಂಗಳೂರು: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಸ್ಕೆಎಸೆಸ್ಸೆಫ್ ದ.ಕ. ವೆಸ್ಟ್ ಜಿಲ್ಲೆಯ ವತಿಯಿಂದ ‘ರಾಷ್ಟ್ರ ರಕ್ಷಣೆಗೆ ಸೌಹಾರ್ದದ ಸಂಕಲ್ಪ’ ಎಂಬ ಧ್ಯೇಯವಾಕ್ಯದಡಿ ಗುರುವಾರ ನಗರದ ಪಡೀಲ್ ಜಂಕ್ಷನ್‌ನಿಂದ ಆರಂಭಗೊಂಡ ಸೌಹಾರ್ದ ಜಾಥಾವು ಅಡ್ಯಾರ್ ಕಣ್ಣೂರ್‌ನಲ್ಲಿ ಸಮಾಪನಗೊಂಡಿತು.

ಬಳಿಕ ಅಡ್ಯಾರ್ ಕಣ್ಣೂರಿನ ಶಂಶುಲ್ ಉಲಮಾ ನಗರದ ಸೀಝರ್ ಮೈದಾನದಲ್ಲಿ ನಡೆದ ಸಮಾವೇಶವನ್ನು ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಡಾ. ಬಿ. ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿವೆ. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ ದೇಶದ ಜನತೆಗೆ ಸಮಾನ ಅವಕಾಶ ಸಿಗದಿರುವ ಬಗ್ಗೆ ಖೇದವಿದೆ. ಮುಂದಿನ ದಿನಗಳಲ್ಲಾದರೂ ಎಲ್ಲರನ್ನೂ ಸಮಾನವಾಗಿ ಕಾಣುವ ಆಡಳಿತ ವ್ಯವಸ್ಥೆ ಜಾರಿಗೆ ಬರಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೆ.ಫಾ. ರೂಪೇಶ್ ಮಾಡ್ತಾ ಮಾತನಾಡಿ, ದೇಶದ ಕೆಲವೆಡೆ ಅಹಿತಕರ ಘಟನೆಗಳು, ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ನಡೆದರೂ ಕೂಡ ಸಾಮರಸ್ಯದ ಹೃದಯಗಳು ಕೂಡ ಇವೆ ಎಂಬುದಕ್ಕೆ ಈ ಸಮಾವೇಶ ಸಾಕ್ಷಿಯಾಗಿದೆ. ಸಾಮರಸ್ಯವೇ ದೇಶದ ಸೌಂದರ್ಯವಾಗಿದೆ. ಅದಕ್ಕೆ ಪೂರಕವಾಗಿ ನಡೆದ ಈ ಮಾನವ ಸರಪಳಿಯು ಮಾನವತೆಯ ಸರಪಳಿಯಾಗಿ ಮಾರ್ಪಾಡಾಗಲಿ ಎಂದರು.

ಎಸ್ಕೆಎಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್ ಕಿನ್ಯ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಹುಸೈನ್ ಬಾಅಲವಿ ತಂಳ್ ದುಆಗೈದರು. ಮುನೀರ್ ಹುದವಿ ವೆಳ್ಳಯಿಲ್, ನಹೀಂ ಫೈಝಿ ಮುಕ್ವೆ, ಅಬೂಬಕರ್ ರಿಯಾಝ್ ರಹ್ಮಾನಿ ಮುಖ್ಯ ಭಾಷಣಗೈದರು.

‘ಮಾನವ ಸರಪಳಿ’ಯೊಂದಿಗೆ ಎಸ್ಕೆಎಸೆಸ್ಸೆಫ್ ಮಂಗಳೂರು ವಲಯ ಅಧ್ಯಕ್ಷ ಎ.ಕೆ.ಅಬ್ದುಲ್ ಖಾದರ್ ಕಣ್ಣೂರು ಪ್ರತಿಜ್ಞಾವಿಧಿ ಬೋಧಿಸಿದರು. ಅನ್ಸಾರುಲ್ ಹುದಾ ದರ್ಸ್ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ಐಕ್ಯತಾ ಗಾನ ಹಾಡಿದರು. ‘ಹರಕೆಯ ಫಲ’ ಮತ್ತು ‘ಕ್ಷಮೆಯ ಪ್ರತಿಫಲ’ ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಸ್ವಾಗತ ಸಮಿತಿಯ ಜನರಲ್ ಕನ್ವೀನರ್ ಹಾರಿಸ್ ಕುದ್ರೋಳಿ ಸ್ವಾಗತಿಸಿದರು. ವೇದಿಕೆಯಲ್ಲಿ ಎಸ್ಕೆಎಸೆಸ್ಸೆಫ್ ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರಿ, ಸೈಯದ್ ಇಬ್ರಾಹೀಂ ಬಾತಿಶ್ ತಂಙಳ್ ಆನೆಕಲ್ಲ್, ಕಾಸಿಂ ದಾರಿಮಿ, ಇಸಾಕ್ ಫೈಝಿ, ಹಸನಬ್ಬ ಬುಖಾರಿ, ಸಿದ್ದೀಕ್ ಅಬ್ದುಲ್ ಖಾದರ್, ಸ್ವದಖತುಲ್ಲಾ ಫೈಝಿ, ಅಬ್ಬಾಸ್ ದಾರಿಮಿ, ಫಕೀರಬ್ಬ ಮಾಸ್ಟರ್, ಅಬ್ದುಲ್ ರಹ್ಮಾನ್ ನಸೀಮಾ ಬೀಡಿ, ಮುಹಮ್ಮದ್ ಅಶೋಕ್ ಬೀಡಿ, ರಮ್ಲಾನ್ ಮಾರಿಪಳ್ಳ, ನೌಶಾದ್ ಫೈಝಿ ಕಣ್ಣೂರು, ಇಫ್ತಿಕಾರ್ ದುಬೈ, ಬದ್ರುದ್ದೀನ್ ಕುಕ್ಕಾಜೆ, ಆರೀಫ್ ಕಮ್ಮಾಜೆ, ಎಂ.ಎಚ್. ಮೊಯ್ದಿನ್ ಹಾಜಿ, ಶಾಹುಲ್ ಹಮೀದ್ ಸೂರಿಂಜೆ, ಆಸೀಫ್ ಅಬ್ದುಲ್ಲಾ, ಇಮ್ತಿಯಾಝ್ ಇಡ್ಯ, ಫಾರೂಕ್ ದಾರಿಮಿ, ಸಿತಾರ್ ಮಜೀದ್ ಹಾಜಿ, ಮೂಸಾ ಕುದ್ದುಪದವು, ಅಬೂಸ್ವಾಲಿಹ್ ಫೈಝಿ, ಮಜೀದ್ ದಾರಿಮಿ, ಹಮೀದ್ ಕಣ್ಣೂರು ಟ್ಯಾಲೆಂಟ್, ನಝೀರ್ ವಳಚ್ಚಿಲ್, ಮುಸ್ತಫಾ ಕಟ್ಟದಪಡ್ಪು, ಇರ್ಫಾನ್ ಎ.ಎಚ್, ಅಬ್ದುಲ್ ಖಾದರ್ ಕಣ್ಣೂರು, ಮುಹಮ್ಮದ್ ಶರೀಫ್, ಕೆ.ಎಸ್. ಹಮೀದ್ ಹಾಜಿ ಕಣ್ಣೂರು, ಅಬ್ದುಲ್ ರಹ್ಮಾನ್ ಸಿಝರ್, ಡಿ.ಮುಹಮ್ಮದ್, ಉಸ್ಮಾನ್ ಏರ್ ಇಂಡಿಯಾ, ಅಲ್ತಾಫ್ ಡೈಮಂಡ್ ಸ್ಕೂಲ್, ಇಸ್ಮಾಯೀಲ್ ಹಾಜಿ ಉಳಾಯಿಬೆಟ್ಟು, ಹಸನಬ್ಬ ಫರಂಗಿಪೇಟೆ, ಮುನೀರ್ ಬೀಡು ಮತ್ತಿತರರು ಉಪಸ್ಥಿತರಿದ್ದರು.

Similar News