ಮಂಗಳೂರು | ಝುಲೇಖಾ ನರ್ಸಿಂಗ್ ಕಾಲೇಜಿನಲ್ಲಿ "ದೀಪ ಬೆಳಗಿಸುವ ಕಾರ್ಯಕ್ರಮ"

Update: 2023-01-27 05:08 GMT

ಮಂಗಳೂರು: ಯೆನಪೋಯಾ ಮೆಡಿಕಲ್ ಸೈನ್ಸ್ ಮತ್ತು ರಿಸರ್ಚ್ ಪ್ರೈವೇಟ್ ಲಿಮಿಟೆಡ್ ಇದರ ಅಂಗ ಸಂಸ್ಥೆಯಾದ ಝುಲೇಖಾ ನರ್ಸಿಂಗ್ ಕಾಲೇಜಿನ "ದೀಪ ಬೆಳಗಿಸುವ ಕಾರ್ಯಕ್ರಮ"ವು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಯೆನೆಪೋಯಾ ನರ್ಸಿಂಗ್ ಹೋಮ್‌ನ ಸೂಪರಿಂಟೆಂಡೆಂಟ್ ಭಾನುಮತಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ,  ಆಧುನಿಕ ವಿಜ್ಞಾನವನ್ನು ಬಳಸಿ ಶುಶ್ರೂಷೆಯನ್ನು ಹೇಗೆ ನೀಡಬಹುದೆಂದು ಉದಯೋನ್ಮುಖ ಶುಶ್ರೂಷ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಆರ್. ಕನಕವಲ್ಲಿ ದೀಪ ಬೆಳಗಿಸುವ ಪ್ರಮಾಣ ವಚನವನ್ನು ಬೋಧಿಸಿದರು. ಯೆನೆಪೋಯಾ ಸ್ಪೆಷಾಲಿಟಿ ಆಸ್ಪತ್ರೆ ನರ್ಸಿಂಗ್ ಸೂಪರಿಂಟೆಂಡೆಂಟ್ ಗ್ರೇಸಿ ಡಿಸಿಲ್ವ, ಉಪಪ್ರಾಂಶುಪಾಲೆ ಲಿಜಿಯಾ ವಿ. ಹಾಲ್ಡರ್ ಉಪಸ್ಥಿತರಿದ್ದರು.

ಕಾಲೇಜಿವ ಪ್ರಾಧ್ಯಾಪಕಿ ಸೋನಿಯಾ ಸಿಕ್ವೇರಾ ದಿನದ ಮಹತ್ವದ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಾದ ಅಯೋನಾ ಹಾಗೂ ಶಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಧ್ಯಾಪಕಿ ಡಾ. ಜಿ. ಪ್ರತಿಭಾ ಸ್ವಾಗತಿಸಿದರು. ಸಹಾಯಕ ಉಪನ್ಯಾಸಕಿ ರೆನಿಟಾ ವಂದಿಸಿದರು.

Similar News