ಕೆಎಂಎಫ್ ನಲ್ಲಿ ಉದ್ಯೋಗದ ಆಮಿಷ: ನಿರ್ಮಾಪಕನ ಬಂಧನ

Update: 2023-01-27 06:54 GMT

ಬೆಂಗಳೂರು, ಜ.27: ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚಿಸಿದ ಆರೋಪದಡಿ ನಿರ್ಮಾಪಕ ಪ್ರಕಾಶ್ ನನ್ನು ಬೆಂಗಳೂರಿನ ಅಡುಗೋಡಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ನಟ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ "ಶಭಾಷ್ ಬಡ್ಡಿ ಮಗನೇ" ಸಿನೆಮಾದ ನಿರ್ಮಾಪಕ ಪ್ರಕಾಶ್ ನನ್ನು ಪೊಲೀಸರು ಬಂಧಿಸಿರುವುದಾಗಿ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ಮೂಲದ ಚರಣ್ ಎಂಬವರಿಂದ ಕೆಎಂಎಫ್ ನಲ್ಲಿ 20 ಲಕ್ಷಕ್ಕೆ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಮುಂಗಡವಾಗಿ 10 ಲಕ್ಷ ರೂ. ಪಡೆದಿದ್ದರು ಎನ್ನಲಾಗಿದೆ. ಕಳೆದ ಡಿಸೆಂಬರ್ ನಲ್ಲಿ ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳ ಲಿಖಿತ ಪರೀಕ್ಷೆ ನಡೆದಿತ್ತು. ಕೆಎಂಎಫ್ ನಿರ್ದೇಶಕರ ಸರ್ಕಾರಿ ಲಾಂಛನ ನಕಲು ಮಾಡಿ ಈತ ಹುದ್ದೆಯ ಆದೇಶದ ಪ್ರತಿ ನೀಡುತ್ತಿದ್ದನು. ಸದ್ಯ ಚರಣ್ ನೀಡಿದ ದೂರಿನ ಮೇರೆಗೆ ಪ್ರಕಾಶ್ ನನ್ನು ಪೊಲೀಸರು ಬಂಧಿಸಿ, ಮುಂದಿನ ಕ್ರಮಕೈಗೊಂಡಿದ್ದಾರೆ.

Similar News