ವಿಟ್ಲ: ಸಹಕಾರಿ ಸಂಘದಲ್ಲಿ ಕಳವಿಗೆ ಯತ್ನ ಪ್ರಕರಣ: ಓರ್ವ ಆರೋಪಿಯ ಬಂಧನ

Update: 2023-01-27 16:02 GMT

ವಿಟ್ಲ: ಕೆಲವು ತಿಂಗಳುಗಳ ಹಿಂದೆ ಪಡ್ನೂರು ಗ್ರಾಮದ ಕೋಡಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಕಟ್ಟಡದ ಶೆಟರ್ ಅನ್ನು ಗ್ಯಾಸ್ ಕಟ್ಟರ್ ಬಳಸಿ ಮುರಿಯಲು ಪ್ರಯತ್ನಿಸಿ ರಾತ್ರಿ ಕಳವು ಮಾಡಲು ಪ್ರಯತ್ನಿಸಿದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. 

ಆರೋಪಿಯನ್ನು ಟಿ.ಕೆ. ಅಬ್ದುಲ್ (37) ಎಂದು ಗುರುತಿಸಲಾಗಿದೆ.

ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾದ ನಾಗರಾಜ ಹೆಚ್ .ಇ. ರವರ ಮಾರ್ಗದರ್ಶನದಂತೆ, ವಿಟ್ಲ ಪೊಲೀಸ್ ಎಸೈ ಸಂದೀಪ್ ಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿಗಳು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮುಖ್ಯ ಆರೋಪಿ, ಸೂತ್ರದಾರ ಅಬೂಬಕ್ಕರ್ ಸಿದ್ಧೀಕ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಇನ್ನು ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

Similar News