×
Ad

ನೇಣು ಬಿಗಿದ ಸ್ಥಿತಿಯಲ್ಲಿ ಬಿಎಂಟಿಸಿ ಚಾಲಕನ ಮೃತ ದೇಹ ಪತ್ತೆ

Update: 2023-01-30 22:02 IST

ಬೆಂಗಳೂರು, ಜ.30: ಬಿಎಂಟಿಸಿ ಚಾಲಕನ ಮೃತದೇಹವೊಂದು ಖಾಸಗಿ ಹೋಟೆಲ್‍ನಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಸೋಮವಾರ ಇಲ್ಲಿನ ಕೆಂಗೇರಿಯ ಖಾಸಗಿ ಹೋಟೆಲ್‍ನಲ್ಲಿ ಮೃತದೇಹ ಪತ್ತೆಯಾಗಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ಪುಟ್ಟೇಗೌಡ(28) ಎಂದು ಪೊಲೀಸರು ಗುರುತಿಸಿದ್ದಾರೆ.

6 ತಿಂಗಳಿಂದ ಬಿಎಂಟಿಸಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುಟ್ಟೇಗೌಡ ಒಂದು ದಿನದ ಹಿಂದೆ ಓರ್ವ ಯುವತಿ ಜೊತೆ ಖಾಸಗಿ ಹೋಟೆಲ್‍ಗೆ ಹೋಗಿದ್ದು, ಬಳಿಕ ಯುವತಿ ಒಬ್ಬಳೇ ಹೊರ ಹೋಗಿದ್ದಾಳೆ ಎನ್ನಲಾಗಿದೆ. 

ಅಲ್ಲದೇ ಆಕೆ ಹೋಗುವಾಗ ಕೊಠಡಿ ಬಾಗಿಲು ಹಾಕಿದ್ದಾಳೆ. ಅಲ್ಲದೇ ಮೃತ ಪುಟ್ಟೇಗೌಡ ಹಣೆ ಮೇಲೆ ಗಾಯಗಳಾಗಿವೆ ಎಂದು ಪುಟ್ಟೇಗೌಡ ಸಂಬಂಧಿಕರು ಆ ಯುವತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Similar News