ಬೆಂಗಳೂರು: 7 ಕೋಟಿ ಮೌಲ್ಯದ ಕೊಕೇನ್ ನುಂಗಿ ಬಂದ ಮಹಿಳೆ, ವಿಮಾನ ನಿಲ್ದಾಣದಲ್ಲಿ ಸೆರೆ

Update: 2023-01-31 13:11 GMT

ಬೆಂಗಳೂರು, ಜ.31:7 ಕೋಟಿ ರೂ ಮೌಲ್ಯದ ಕೊಕೇನ್ ಹೊಂದಿರುವ 58 ಕ್ಯಾಪ್ಸುಲ್‍ಗಳನ್ನು ಸಾಗಿಸಲು ಯತ್ನಿಸಿದ್ದ ವಿದೇಶಿ ಮಹಿಳೆಯೊಬ್ಬರನ್ನು ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್ (40) ಮಹಿಳೆಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ(ಕೆಐಎ)ಕಸ್ಟಮ್ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಜ.14 ರಂದು ಬಂಧಿತ ಮಹಿಳೆ ಕ್ಯಾಪ್ಸೂಲ್‍ಗಳನ್ನು ನುಂಗಿ ನಂತರ ವೆಸ್ಟ್ ಆಫ್ರಿಕಾದ ಗಿನಿಯಾದಿಂದ ವಿಮಾನದಲ್ಲಿ ದುಬೈ ಮೂಲಕ ಬೆಂಗಳೂರಿಗೆ ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಆಕೆಯ ಕಿಬ್ಬೊಟ್ಟೆಯಲ್ಲಿ ಕೊಕೇನ್ ಇರುವ 58 ಕ್ಯಾಪ್ಸುಲ್‍ಗಳು ಇರುವುದು ಸಾಬೀತಾಗಿದ್ದು, ವಿಚಾರಣೆಯ ವೇಳೆ, ಮಹಿಳೆ ಜ.13 ರಂದು ಗಿನಿಯಾದ ಕೊನಾಕ್ರಿ ಗ್ಬೆಸ್ಸಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ 686 ಗ್ರಾಂ ಕೊಕೇನ್ ಅನ್ನು ಸಾಗಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಪೊಲೀಸರು ವೈದ್ಯಕೀಯ ಸಹಾಯದಿಂದ ಆಕೆಯ ದೇಹದಿಂದ ಎಲ್ಲ ಕ್ಯಾಪ್ಸುಲ್‍ಗಳನ್ನು ಹೊರತೆಗೆದಿದ್ದಾರೆ ಎಂದು ತಿಳಿದುಬಂದಿದೆ.

Similar News