ಬೆಂಗಳೂರು ಟಾರ್ಪೆಡೊಸ್‌ಗೆ ಡೇವಿಡ್ ಗೆ ನೂತನ ಕೋಚ್

Update: 2023-02-01 13:04 GMT

ಬೆಂಗಳೂರು: 2ನೇ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಕಣಕ್ಕಿಳಿಯುವ ಮುನ್ನ ಬೆಂಗಳೂರು ಟಾರ್ಪೆಡೊಸ್ ತಂಡ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ, ಅಮೆರಿಕದ ಡೇವಿಡ್ ಲೀ ಅವರನ್ನು ನೂತನ ಕೋಚ್ ಆಗಿ ನೇಮಿಸಿದೆ.

ಡೇವಿಡ್ ಕಳೆದ ಬಾರಿ ಕ್ಯಾಲಿಕಟ್ ಹೀರೋಸ್ ತಂಡದ ಪರ ಆಡಿದ್ದು, ಮೊದಲ ಬಾರಿ ತರಬೇತುದಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿ ನೌಕೌಟ್ ಪ್ರವೇಶಿಸಲು ವಿಫಲವಾಗಿದ್ದ ಬೆಂಗಳೂರು ತಂಡ ಈ ಬಾರಿ ಪಂಕಜ್ ಶರ್ಮಾ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದೆ. ತಂಡದಲ್ಲಿ ಕರ್ನಾಟಕ ವಿನಾಯಕ್ ರೋಖಡೆ ಸೇರಿದಂತೆ ಪ್ರಮುಖ ಆಟಗಾರರಿದ್ದು, ಫೆ.೪ಕ್ಕೆ ಮೊದಲ ಪಂದ್ಯದಲ್ಲಿ ಕೋಲ್ಕತಾ ಥಂಡರ್‌ಬೋಲ್ಟ್ಸ್ ವಿರುದ್ಧ ಆಡಲಿದೆ.

Similar News