‘ಕ್ಯಾನ್ಸರ್’ ಕೇವಲ ದೈಹಿಕ ಯುದ್ಧವಲ್ಲ: ನಟಿ ಸಂಯುಕ್ತ ಹೊರನಾಡು

ಆಸ್ಟರ್ ಸಿಎಂಐ ಆಸ್ಪತ್ರೆಯಿಂದ ಕ್ಯಾನ್ಸರ್ ಜಾಗೃತಿ

Update: 2023-02-03 11:26 GMT

ಬೆಂಗಳೂರು, ಫೆ. 3: ಕ್ಯಾನ್ಸರ್ ಕೇವಲ ದೈಹಿಕ ಯುದ್ಧವಲ್ಲ, ಅದು ಮಾನಸಿಕ ಯುದ್ಧವೂ ಹೌದು. ರೋಗದ ಸುತ್ತಲೂ ಅನೇಕ ಮಿಥ್ಯೆಗಳು ಮತ್ತು ತಪ್ಪು ಕಲ್ಪನೆಗಳಿವೆ. ಆದರೆ, ಸತ್ಯವೆಂದರೆ ಆರಂಭಿಕ ಸ್ವಯಂ ತಪಾಸಣೆ, ರೋಗ ನಿರ್ಣಯ ಮತ್ತು ಸರಿಯಾದ ಚಿಕಿತ್ಸೆಯು ಗುಣಪಡಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ’ ಎಂದು ನಟಿ ಸಂಯುಕ್ತಾ ಹೊರನಾಡು ತಿಳಿಸಿದ್ದಾರೆ.

ಶುಕ್ರವಾರ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಆಸ್ಟರ್ ಸಿಎಂಐ ಆಸ್ಪತ್ರೆಯು ಏರ್ಪಡಿಸಿದ್ದ ‘ಕ್ಯಾನ್ಸರ್ ಜಾಗೃತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ರೋಗದ ಬಗ್ಗೆ ಅನಗತ್ಯವಾಗಿ ಭಯ ಉಂಟುಮಾಡಬಾರದು. ಬೇರೆಯವರು ನಮ್ಮ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡಬಾರದು’ ಎಂದು ಸಲಹೆ ನೀಡಿದರು.

ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ಡಾ.ನಿತೀಶ್ ಶೆಟ್ಟಿ ಮಾತನಾಡಿ ‘ಕ್ಯಾನ್ಸರ್ ಕಾಯಿಲೆಗೆ ಪ್ರತಿವರ್ಷ ಹಲವು ಜನರನ್ನು ಕಾಡುತ್ತಿದೆ. ಈ ರೋಗದ ಬಗ್ಗೆ ಜನರಲ್ಲ್ಲಿ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿ. ಆಧುನಿಕ ತಂತ್ರಜ್ಞಾನಗಳ ನೆರವಿನಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಸಾಧ್ಯವಾಗುತ್ತಿದೆ’ ಎಂದು ಹೇಳಿದರು.

ಕ್ಯಾನ್ಸರ್ ತಜ್ಞ ಡಾ.ಸೋಮಶೇಖರ್ ಮಾತನಾಡಿ, ‘ಕ್ಯಾನ್ಸರ್ ರೋಗವು ಆರೈಕೆಯ ಅಂತರವನ್ನು ನಿವಾರಿಸುವುದು ಆರೋಗ್ಯ ಕ್ಷೇತ್ರದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ತಂತ್ರಜ್ಞಾನದ ಪ್ರಗತಿ, ಒಂದೆ ಸೂರಿನಡಿ ಎಲ್ಲ್ಲ ಸೂಪರ್ ಸ್ಪೆಷಾಲಿಟಿ ಸೇವೆಗಳು, ವೈದ್ಯಕೀಯ ತಜ್ಞರ ನೆರವಿನಿಂದ ರೋಗಿಗಳಿಗೆ ಸಮಗ್ರ ಆರೈಕೆ ಒದಗಿಸಲು ಸಾಧ್ಯ’ ಎಂದು ನುಡಿದರು.

Similar News