ಸಂಚಾರ ನಿಯಮ ಉಲ್ಲಂಘನೆ; ಶೇ.50 ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ಒಂದೇ ದಿನದಲ್ಲಿ 5.61 ಕೋಟಿ ರೂ.ದಂಡ ಪಾವತಿ

Update: 2023-02-03 17:11 GMT

ಬೆಂಗಳೂರು, ಫೆ.3: ಸಂಚಾರ ನಿಯಮ ಉಲ್ಲಂಘನೆಗೆ ಶೇಕಡ 50ರಷ್ಟು ರಿಯಾಯಿತಿ ಘೋಷಿಸುತ್ತಿದ್ದಂತೆ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. 

ಇಂದು‌ ಒಂದೇ ದಿನ (ಸಂಜೆ 5 ಗಂಟೆಯವರೆಗೆ) ನೇರವಾಗಿ ಒಟ್ಟು 201828 ಪ್ರಕರಣಗಳಲ್ಲಿ  5.61 ಕೋಟಿ ರೂ.ದಂಡ ಪಾವತಿ ಮಾಡಲಾಗಿದೆ.

ಪೊಲೀಸರ ಬಳಿ 89,699 ಪ್ರಕರಣಗಳಲ್ಲಿ 2.17 ಕೋಟಿ ರೂ., ಪೇಟಿಎಂ ಮೂಲಕ 104 273 ಪ್ರಕರಣಗಳಿಗೆ 3.23 ಕೋಟಿ ರೂ., ಸಂಚಾರ ನಿರ್ವಹಣಾ ಕೇಂದ್ರದಲ್ಲಿ 560 ಪ್ರಕರಣಗಳಲ್ಲಿ 89 ಸಾವಿರ ರೂ.,  ಬೆಂಗಳೂರು ಒನ್ ಕೇಂದ್ರದಲ್ಲಿ 7,316 ಪ್ರಕರಣಗಳಲ್ಲಿ 16.21 ಲಕ್ಷ ರೂ.ಸೇರಿದಂತೆ ಒಟ್ಟು 201828 ಪ್ರಕರಣಗಳಲ್ಲಿ  5.61 ಕೋಟಿ ರೂ.ದಂಡ ಪಾವತಿ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Similar News