ಜಪಾನ್ ಮೂಲದ ಕಂಪೆನಿಯಿಂದ ವಜಾಗೊಂಡ ಕಾರ್ಮಿಕರ ಮರುನೇಮಕಕ್ಕೆ ಆಗ್ರಹ

Update: 2023-02-03 17:39 GMT

ಬೆಂಗಳೂರು, ಫೆ.3: ರಾಮನಗರ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಜಪಾನ್ ಮೂಲದ ಯೂಜಾಕಿ ಕಂಪೆನಿಯಲ್ಲಿ ಏಕಾಎಕಿ 153 ಕಾರ್ಮಿಕರನ್ನು ಕೆಲಸದಿಂದ ತೆಗೆಯಲಾಗಿದೆ. ಹಾಗಾಗಿ ಇದರಿಂದ ನೌಕರರು ಅತಂತ್ರರಾಗಿದ್ದು, ಎಲ್ಲ ಕಾರ್ಮಿಕರನ್ನು ಪುನರ್ ನೇಮಕ ಮಾಡಿಕೊಳ್ಳಬೇಕು ಎಂದು ಎಐಸಿಸಿಟಿಯು ಒತ್ತಾಯಿಸಿದೆ. 

ಶುಕ್ರವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಯೂನಿಯನ್‍ನ ಮುಖಂಡ ಅಶೋಕ್ ಮಾತನಾಡಿ, ಕಂಪೆನಿಯಲ್ಲಿ ಸುಮಾರು 2,500 ಕಾರ್ಮಿಕರು ಕೆಲಸವನ್ನು ಮಾಡುತ್ತಿದ್ದಾರೆ. ಇವರಲ್ಲಿ ಬಹುತೇಕ ಕಾರ್ಮಿಕರನ್ನು ತರಬೇತಿಗೆಂದು ತೆಗೆದುಕೊಂಡು, ಅವರನ್ನು 8 ರಿಂದ 16 ಗಂಟೆಯ ವರೆಗೂ ದುಡಿಸಿಕೊಂಡು, ಏಕಾಏಕಿ ಕೆಲಸದಿಂದ ತೆಗೆದಿದ್ದಾರೆ. ಇದು ಕಾನೂನುಬಾಹಿರವಾಗಿದೆ ಎಂದರು. 

ಆಡಳಿತ ಮಂಡಳಿಯು ಮೊದಲು 53 ಜನರನ್ನು ತೆಗೆದಿದ್ದು, ಅವರ ಬೆಂಬಲಕ್ಕೆ ನಿಂತ 100 ಜನರನ್ನು ಬಳಿಕ ಕೆಲಸದಿಂದ ವಜಾ ಮಾಡಿದೆ. ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಯ ನೇತೃತ್ವದಲ್ಲಿ ಸಮನ್ವಯ ಸಭೆಯನ್ನು ನಡೆಸಿದ್ದು, ಅಧಿಕಾರಿಯು ಮಂಡಳಿಗೆ ನೇಮಕ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಆದರೆ ಕಂಪನಿಯು ಕೆಲಸಕ್ಕೆ ಸೇರಿಸಿಕೊಂಡಿಲ್ಲ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ನಿರ್ಮಲ, ವಿಜಯ್, ಪಲ್ಲವಿ, ಸಿಂಧು ಮತ್ತು ಮಹಾನಂದ ಉಪಸ್ಥಿತರಿದ್ದರು.

Similar News