ಮಂಗಳೂರು: ನಾಪತ್ತೆಯಾದ ಯುವತಿಯ ಪತ್ತೆಗೆ ಮನವಿ

Update: 2023-02-03 18:21 GMT

ಮಂಗಳೂರು: ನಗರದ ಪೌಲಿನ್ ಡಿಸೋಜ ಎಂಬವರ ಪುತ್ರಿ ಡಿಂಪಲ್ ಪ್ರಿಯಾ ಡಿಸೋಜ (22) ಎಂಬಾಕೆ 2022ರ ಅಕ್ಟೋಬರ್ 25ರಿಂದ ನಾಪತ್ತೆಯಾಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ತಿಳಿಸಿದ್ದಾರೆ.

ಸುಮಾರು 5 ಅಡಿ ಎತ್ತರದ, ಬಿಳಿ ಮೈಬಣ್ಣದ, ಕೊಂಕಣಿ, ತುಳು, ಕನ್ನಡ, ಇಂಗ್ಲಿಷ್ ಮಾತನಾಡಬಲ್ಲ ಈಕೆಯನ್ನು ಕಂಡವರು ಮಾಹಿತಿ ನೀಡುವಂತೆ ದೂ.ಸಂ: 0824-2220518/ಪೊಲೀಸ್ ನಿಯಂತ್ರಣ ಕೊಠಡಿ :0824-2220500, ತನಿಖಾಧಿಕಾರಿ: 9480805339 ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Similar News