ಶೇ.50ರಷ್ಟು ರಿಯಾಯಿತಿ; 2ನೇ ದಿನ 6.80 ಕೋಟಿ ಟ್ರಾಫಿಕ್ ಕೇಸ್ ದಂಡ ಸಂಗ್ರಹ, 2.52 ಲಕ್ಷ ಪ್ರಕರಣ ಇತ್ಯರ್ಥ

Update: 2023-02-04 17:12 GMT

ಬೆಂಗಳೂರು, ಫೆ.4: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಸಲು ರಾಜ್ಯ ಸರಕಾರ ಶೇ.50ರಷ್ಟು ರಿಯಾಯಿತಿ ಬೆನ್ನಲ್ಲೇ ರಾಜಧಾನಿಯಲ್ಲಿ ಶನಿವಾರ ಎರಡನೆ ದಿನ 6.80 ಕೋಟಿ ದಂಡ ಮೊತ್ತ ಸಂಗ್ರಹವಾಗಿದೆ. 

ದಂಡ ಸಂಗ್ರಹಗೊಂಡ ಪ್ರಕರಣಗಳ ಸಂಖ್ಯೆ 2.52 ಲಕ್ಷ, ನಗರದ ಠಾಣೆಗಳಲ್ಲಿ ಪೊಲೀಸರ ಬಳಿ 114685 ಪ್ರಕರಣಗಳ ಸಂಬಂಧ 2,72,45,400 ರೂ., ಪೇಟಿಎಂ ಆ್ಯಪ್ ಮುಖಾಂತರ 1,06,980 ಪ್ರಕರಣಗಳಲ್ಲಿ 3,27,81,350, ಸಂಚಾರ ನಿರ್ವಹಣಾ ಕೇಂದ್ರದ ಕೌಂಟರ್‍ನಲ್ಲಿ 724 ಪ್ರಕರಣಗಳ ಸಂಬಂಧ 18,68,00, ಬೆಂಗಳೂರು ಒನ್ ಕೇಂದ್ರ ಮುಖಾಂತರ 3,131 ಪ್ರಕರಣಗಳಲ್ಲಿ 78,58,95 ರೂಪಾಯಿ ಸೇರಿದಂತೆ ಒಟ್ಟು 6,80,72,500 ರೂ.ದಂಡ ಸಂಗ್ರಹವಾಗಿದೆ.  
 
  
  

Similar News