ಸಂಚಾರ ನಿಯಮ ಉಲ್ಲಂಘನೆ: ಶೇ.50 ರಿಯಾಯಿತಿ ಪ್ರಕಟಿಸಿದ ಬೆನ್ನಲ್ಲೇ ಮಂಗಳೂರಿನಲ್ಲಿ ವಸೂಲಾದ ದಂಡವೆಷ್ಟು ಗೊತ್ತೇ?

Update: 2023-02-04 18:07 GMT

ಮಂಗಳೂರು: ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸರ್ಕಾರ ಶೇ.50 ರಿಯಾಯಿತಿಯ ದಂಡ ವಸೂಲಿ ಪ್ರಕಟಿಸಿದ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ 1,929 ಪ್ರಕರಣಗಳಲ್ಲಿ 4.69 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಮಂಗಳೂರು ಸಂಚಾರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ 319 ಕೇಸು- 88,100 ರೂ, ಸಂಚಾರ ಪಶ್ಚಿಮದಲ್ಲಿ 375 ಕೇಸು- 92,950 ರೂ., ಸಂಚಾರ ಉತ್ತರದಲ್ಲಿ 384 ಕೇಸು- 79,750 ರೂ., ಸಂಚಾರ ದಕ್ಷಿಣದಲ್ಲಿ 654 ಕೇಸು -1,58,300 ರೂ., ಮಂಗಳೂರು ವನ್‌ನಲ್ಲಿ 161 ಕೇಸು -41,500 ರೂ. ಸಂಚಾರ ಎಸಿಪಿ 36 ಕೇಸು- ದಾಖಲಿಸಿದ್ದು 8,450 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಪ್ರಕಟನೆ ತಿಳಿಸಿದೆ.

ಇದನ್ನೂ ಓದಿ: ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿ ಪತ್ತೆಗೆ ಮುಂದುವರಿದ ಶೋಧ

Similar News