ಗುಂಡಿ ಮುಚ್ಚಲು 7,121 ಕೋಟಿ ರೂ. ಖರ್ಚು ಮಾಡಿದ BBMP: ನಿಮ್ಮ ಲೂಟಿ ಇಷ್ಟು ದುಬಾರಿಯೇ ಎಂದು ಪ್ರಶ್ನಿಸಿದ ಕಾಂಗ್ರೆಸ್

Update: 2023-02-05 13:17 GMT

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಳೆದ ಮೂರು ವರ್ಷಗಳಲ್ಲಿ (2019-20, 2020-21 ಮತ್ತು 2021-22) ನಗರದ ಪ್ರಮುಖ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು 7,121 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಅದರ ರಸ್ತೆ ಮೂಲಸೌಕರ್ಯ ಇಲಾಖೆ ಹಂಚಿಕೊಂಡ ಅಂಕಿಅಂಶಗಳು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯ ಸರಕಾರವನ್ನು ವಿರೋಧ ಪಕ್ಷ ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ''3 ವರ್ಷಗಳಲ್ಲಿ ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು BBMP ಮಾಡಿದ ಖರ್ಚು ₹7,121 ಕೋಟಿ ರೂ., ಸುಮಾರು 25,000 ಗುಂಡಿಗಳನ್ನು ಮುಚ್ಚಿದೆಯಂತೆ, ಹಾಗಾದರೆ ಒಂದು ಗುಂಡಿ ಮುಚ್ಚಲು ಮಾಡಿದ ಖರ್ಚು - ಅಂದಾಜು 28 ಲಕ್ಷ. ಅದರಲ್ಲಿ 40% ಕಳೆದರೂ ಒಂದು ಗುಂಡಿಯ ಖರ್ಚು 16 ಲಕ್ಷ, ಆದರೂ ರಸ್ತೆಗಳು ಗುಂಡಿಮಯ. ನಿಮ್ಮ ಲೂಟಿ ಇಷ್ಟು ದುಬಾರಿಯೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಪ್ರಶ್ನೆ ಮಾಡಿದೆ. 

Similar News