ಬೆಂಗಳೂರು ವಿವಿಯ ಅತಿಥಿ ಉಪನ್ಯಾಸಕ ನೇಮಕಾತಿಯಲ್ಲಿ ಅಕ್ರಮ: ಸಿಂಡಿಕೇಟ್ ಸದಸ್ಯರ ಆರೋಪ

''ವಿದ್ಯಾರ್ಥಿಗಳಿಗಿಂತ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಾಗಿದೆ''

Update: 2023-02-05 12:56 GMT

ಬೆಂಗಳೂರು, ಫೆ. 5: ಪ್ರಸಕ್ತ ವರ್ಷದಲ್ಲಿ ಬೆಂಗಳೂರು ವಿವಿಯ ರಾಮನಗರ ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳಿಗೆ ಅತಿಥಿ ಉಪನ್ಯಾಸಕರನ್ನು ನಿಯಮಗಳನ್ನು ಅನುಸರಿಸದೇ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ಸಿಂಡಿಕೇಟ್ ಆರೋಪಿಸಿದೆ. 

ಸ್ನಾತಕೋತ್ತರ ಕೇಂದ್ರದ ಎಂ.ಎಸ್.ಡಬ್ಲ್ಯೂ., ಅರ್ಥಶಾಸ್ತ್ರ, ಸಮಾಜಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಭಾಗಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಅನುಸರಿಸದೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪಿಎಚ್‍ಡಿ ಹಾಗೂ ಎನ್‍ಇಟಿ ಅರ್ಹತೆ ಇದ್ದರೂ ಅಂತಹ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ. ಈ ವಿದ್ಯಾರ್ಹತೆ ಇಲ್ಲದ ಹಾಗೂ ಅನುಭವ ಇಲ್ಲದ ಅಭ್ಯರ್ಥಿಗಳಿಗೆ ಅಧ್ಯತೆ ನೀಡಲಾಗಿದೆ. ಆದುದರಿಂದ ನೇಮಕಾತಿಯನ್ನು ತಡೆಹಿಡಿಯುಂತೆ ಆಗ್ರಹಿಸಿದೆ. 

ರಾಮನಗರ ಸ್ನಾತಕೋತ್ತರ ಕೇಂದ್ರದ ಕೆಲವು ವಿಭಾಗಗಳಲ್ಲಿ ಪ್ರವೇಶ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳಿಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚಾಗಿರುತ್ತಾರೆ. ಇದರಿಂದ ವಿಶ್ವ ವಿದ್ಯಾಲಯಕ್ಕೆ ಆರ್ಥಿಕ ಹೊರೆ ಆಗುತ್ತಿದೆ. ಆದುದರಿಂದ ಈ ಕುರಿತು ಸಮಿತಿಯನ್ನು ರಚಿಸಿ, ವರದಿಯನ್ನು ಪಡೆಯಬೇಕು ಎಂದು ಸಿಂಡಿಕೇಟ್ ಪಟ್ಟು ಹಿಡಿದಿದೆ.

Similar News