ಶೇ.50ರಷ್ಟು ರಿಯಾಯಿತಿ; ಮಂಗಳೂರಿನಲ್ಲಿ ದಂಡ ವಸೂಲಿ ಪ್ರಕ್ರಿಯೆ ಬಿರುಸು

Update: 2023-02-05 18:20 GMT

ಮಂಗಳೂರು, ಫೆ.5: ಸಂಚಾರ ನಿಯಮ ಉಲ್ಲಂಘನೆಯಡಿ ಶೇ.50 ದಂಡ ರಿಯಾಯಿತಿ ನೀಡಿ ರಾಜ್ಯ ಸರಕಾರ ಆದೇಶಿ ಸಿದ ಹಿನ್ನೆಲೆಯಲ್ಲಿ ಮೂರನೇ ದಿನವಾದ ರವಿವಾರವೂ ದಂಡ ವಸೂಲಿ ಪ್ರಕ್ರಿಯೆ ಬಿರುಸುಗೊಂಡಿವೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಯಲ್ಲಿ 513 ಪ್ರಕರಣಗಳಲ್ಲಿ 1,42,850 ರೂ. ದಂಡ ವಸೂಲಿ ಮಾಡಲಾಗಿದೆ.

ಇ ಚಲನ್ ಮೂಲಕ ಸಂಚಾರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ 118 ಪ್ರಕರಣಗಳಲ್ಲಿ 26,350 ರೂ., ಸ್ಥಳದಲ್ಲೇ 18 ಪ್ರಕರಣಗಳಲ್ಲಿ 8,100 ರೂ. ಸಹಿತ 136 ಪ್ರಕರಣಗಳಲ್ಲಿ 34,450 ರೂ. ದಂಡ ವಸೂಲಿ ಮಾಡಲಾಗಿದೆ. ಸಂಚಾರ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ಇ ಚಲನ್‌ನ 26 ಪ್ರಕರಣಗಳಲ್ಲಿ 6,500 ರೂ., ಸಂಚಾರ ಉತ್ತರ ಠಾಣಾ ವ್ಯಾಪ್ತಿಯಲ್ಲಿ ಇ ಚಲನ್‌ನಲ್ಲಿ 59 ಪ್ರಕರಣಗಳಲ್ಲಿ 17,150 ರೂ., ಸ್ಥಳದಲ್ಲೇ 32 ಪ್ರಕರಣಗಳಲ್ಲಿ 12,100 ರೂ. ಸಹಿತ 91 ಪ್ರಕರಣಗಳಲ್ಲಿ 29,250 ರೂ. ಶುಲ್ಕ ವಸೂಲಾಗಿದೆ.

ಸಂಚಾರ ದಕ್ಷಿಣ ಠಾಣಾ ವ್ಯಾಪ್ತಿಯಲ್ಲಿ ಇ ಚಲನ್‌ನಲ್ಲಿ 181 ಪ್ರಕರಣಗಳಲ್ಲಿ 52,100 ರೂ., ಸ್ಥಳದಲ್ಲೇ 1 ಪ್ರಕರಣದಲ್ಲಿ 200 ರೂ. ಸಹಿತ 182 ಪ್ರಕರಣಗಳಲ್ಲಿ 52,300 ರೂ. ದಂಡ ವಸೂಲಾಗಿದೆ. ಮಂಗಳೂರು ಒನ್‌ನಲ್ಲಿ ಇ ಚಲನ್‌ನಲ್ಲಿ 78 ಪ್ರಕರಣಗಳ ಪೈಕಿ 20,350 ರೂ. ವಸೂಲಾಗಿದೆ. ಒಟ್ಟು ಇ ಚಲನ್‌ನ 462 ಪ್ರಕರಣಗಳಲ್ಲಿ 1,22,450 ರೂ. ವಸೂಲಿ ಮಾಡಲಾಗಿದ್ದು, ಸ್ಥಳದಲ್ಲೇ 51 ಪ್ರಕರಣಗಳಲ್ಲಿ 20,400 ರೂ.ದಂಡ ವಸೂಲು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News