ಉಳ್ಳಾಲ: ಜಾಮಿಅ ಪ್ರಚಾರ, ಸಮಸ್ತ ಆದರ್ಶ ಸಮ್ಮೇಳನ

Update: 2023-02-06 06:50 GMT

ಉಳ್ಳಾಲ:  ಜಾಮಿಅ ನೂರಿಯ್ಯ ಅರಬಿಯ್ಯ ಕಾಲೇಜು ಉನ್ನತ ಹಂತಕ್ಕೆ ತಲುಪಿದೆ. ಧಾರ್ಮಿಕ ಶಿಕ್ಷಣ  ಬೆಳವಣಿಗೆ ಇಂತಹ ಕಾಲೇಜುಗಳಿಂದ ಮಾತ್ರ ಸಾಧ್ಯ. ಇಂತಹ ಕಾಲೇಜು ಉಳಿಸಿ ಕೊಂಡು ಬೆಳೆಸುವ ಜವಾಬ್ದಾರಿ ನಮ್ಮದು ಎಂದು ಮದನಿ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ಹೇಳಿದ್ದಾರೆ.

ಅವರು  ದಕ್ಷಿಣ ಕನ್ನಡ ಜಿಲ್ಲಾ ಸ್ಟೂಡೆಂಟ್ ಫಾರಂ ಹಾಗೂ ಎಸ್ ಕೆಎಸ್ಎಸ್ಎಫ್ ದೇರಳಕಟ್ಟೆ ಯುನಿಟ್ ಇದರ ಆಶ್ರಯದಲ್ಲಿ  ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ರವಿವಾರ ನಡೆದ ಜಾಮಿಅ ನೂರಿಯ್ಯ ಅರಬಿಯ್ಯ ಪಟ್ಟಿಕ್ಕಾಡ್ ಡೈಮಂಡ್ ಜುಬಿಲಿ ಪ್ರಯುಕ್ತ  ಜಾಮಿಅ ಪ್ರಚಾರ ಮತ್ತು ಸಮಸ್ತ ಆದರ್ಶ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು

ಸೈಯದ್ ಅಮೀರ್ ತಂಙಳ್ ಕಿನ್ಯ ದುಆ ನೆರವೇರಿಸಿದರು. ಪಟ್ಟಿಕ್ಕಾಡ್ ಜಾಮಿಅ ನೂರಿಯ ಅರೆಬಿಯ್ಯ ಕಾಲೇಜು ಪ್ರೊಅಬೂ ತ್ವಾಹಿರ್ ಫೈಝಿ ಚುಂಗತರ ಮುಖ್ಯ ಭಾಷಣ ಮಾಡಿದರು. ಉಸ್ತಾದ್ ಮುಜ್ ತಬ ಫೈಝಿ ಆನಕ್ಕರ ಆದರ್ಶ ಭಾಷಣ ಮಾಡಿದರು.

ಪಟ್ಟಿಕ್ಕಾಡ್ ಜಾಮಿಅ ನೂರಿಯ ಅರೆಬಿಯ್ಯ ಕಾಲೇಜು ಪ್ರೊ.ಶೈಖುನಾ ಲಿಯಾವುದ್ದೀನ್ ಫೈಝಿ ಅನುಗ್ರಹ ಸಂದೇಶ ನೀಡಿದರು. ಓ.ಟಿ.ಉಸ್ತಾದ್ ಮುಡಿಕ್ಕೋಡು ಹಾಗೂ ಬಿಜೆಎಂ ಖತೀಬ್  ಇಸ್ಹಾಕ್ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಪನೀರ್  ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಎಸ್ಕೆಎಸ್ಎಸ್ಎಫ್ ರಾಜ್ಯಾಧ್ಯಕ್ಷ ಮುಫ್ತಿ ರಫೀಕ್ ಅಹ್ಮದ್ ಹುದವಿ ಕೋಲಾರ, ದೇರಳಕಟ್ಟೆ ಶಂಶುಲ್ ಉಲಮಾ ಅರೆಬಿಕ್ ಕಾಲೇಜು ಪ್ರೊಫೆಸರ್ ನಝೀರ್ ಹುಸೈನ್ ಫೈಝಿ ಅಲ್ ಹಾಮಿದಿ, ಅಬ್ದುಲ್ ರಹಿಮಾನ್ ತಬೂಕು ದಾರಿಮಿ, ಮದ್ರಸ ಮೆನೇಜ್ ಮೆಂಟ್ ಅಧ್ಯಕ್ಷ ಅಬೂಬಕರ್ ಹಾಜಿ ದೇರಳಕಟ್ಟೆ, ಏಶಿಯನ್ ಬಾವಾ ಹಾಜಿ,  ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎಂ.ಸತ್ತಾರ್ , ಸದಸ್ಯ  ಇಕ್ಬಾಲ್ ಎಚ್.ಆರ್.ಇಬ್ರಾಹೀಮ್ ಬದ್ಯಾರ್, ಎಸ್ಕೆಎಸ್ಎಸ್ಎಫ್ ಮಾಜಿ ಅಧ್ಯಕ್ಷ ಕರೀಂ ಹಾಜಿ ಬಿಜೆಎಂ ಅಧ್ಯಕ್ಷ ಆರ್ ಅಹ್ಮದ್ ಶೇಠ್, ಕಾರ್ಯದರ್ಶಿ ಅಬ್ದುಲ್ ರಶೀದ್,  ಮುಹಮ್ಮದ್ ನಡುಪದವು,  ಹಾಜಿ ಇಲ್ಯಾಸ್ ಡಿ,ಅನ್ಸಾರುಲ್ ಮುಸ್ಲೀಮೀನ್ ಅಸೋಸಿಯೇಷನ್ ಅಧ್ಯಕ್ಷ ಹನೀಫ್ ಜೆ.,ಅಬ್ದುಲ್ ಲತೀಫ್, ಡಿಕೆಎಸ್ಎಫ್ ಅಧ್ಯಕ್ಷ ಮೊಹಮ್ಮದ್ ತಂಙಳ್ , ಮೊಯ್ದಿನ್ ಕುಂಞಿ ಕಿನ್ಯಮತ್ತಿತರರು ಉಪಸ್ಥಿತರಿದ್ದರು ತನ್ಶೀಫ್  ಮದಕ ಸ್ವಾಗತಿಸಿದರು.

Similar News