ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ‌ ನಿಧನ

Update: 2023-02-06 11:04 GMT

ಬೆಂಗಳೂರು: ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ‌ (74 ವರ್ಷ) ಅವರು ಸೋಮವಾರ ಬೆಳಿಗ್ಗೆ ನಿಧನರಾದರು.

ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ 1949ರಲ್ಲಿ ವರ್ಮ ಅವರು ಜನಿಸಿದ್ದ ವರ್ಮ ಅವರು ತಂದೆ ಕೃಷ್ಣಮಾಚಾರ್ಯರು,  ಸಂಗೀತಗಾರರಾಗಿದ್ದರು. ತಾಯಿ ಜಯಲಕ್ಷ್ಮಿ ಅವರಿಗೆ ಜನಿಸಿದರು. ಅವರೂ ಕೂಡ ಚಿತ್ರ ಕಲಾವಿದರಾಗಿದ್ದರು.

ವರ್ಮ ಅವರ ಸಾಧನೆಗೆ ರಾಜ್ಯ ಲಲಿತ‌ಕಲಾ ಅಕಾಡೆಮಿ‌ ಪ್ರಶಸ್ತಿ, ರಾಜ್ಯೋತ್ಸವ ‌ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್‌ಗಾಂಧಿ‌ ಪ್ರಶಸ್ತಿ ಲಭಿಸಿದ್ದವು.2011ರಲ್ಲಿ‌ ಬೆಂಗಳೂರು ‌ವಿಶ್ವವಿದ್ಯಾಲಯವು ವರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು.

Similar News