ಕಲಾಂಗಣದಲ್ಲಿ ಗೊಮ್ಟೆ ಗೊಂಯ್ ಹೊರಾಯ್ತಾ ಸಂಗೀತ ಕಛೇರಿ

Update: 2023-02-07 14:44 GMT

ಮಂಗಳೂರು: ಮಾಂಡ್ ಸೊಭಾಣ್ ಸಂಸ್ಥೆಯ ವತಿಯಿಂದ ತಿಂಗಳ ವೇದಿಕೆ ಸರಣಿಯ 254 ನೇ ಕಾರ್ಯಕ್ರಮವು ಫೆ.05ರಂದು ಮಂಗಳೂರಿನ ಕಲಾಂಗಣದಲ್ಲಿ ಗಾಯಕ ಮತ್ತು ಸಂಗೀತಗಾರ ವಂ. ಸಿಪ್ರಿಯನ್ ಕಾರ್ಲೊ ಯುಎಸ್‌ಎ ಇವರು ಗಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ನತಾಲಾಂ ಖೆಳ್ (ಕ್ರಿಸ್ಮಸ್ ಆಟ) ಸ್ಪರ್ಧೆಯ ವಿಜೇತರ ಬಹುಮಾನ ವಿತರಣೆ ನಡೆಯಿತು. ಕೊರ್ಡೆಲ್ ಕಲಾಕಾರ್ ಪ್ರಥಮ ಸ್ಥಾನಿಯಾಗಿ 25,000ರೂ. ಪಡೆದರೆ, ನತಾಲಾಂ ನೆಕೆತ್ರಾಂ ಪೆರ್ಮನ್ನೂರ್ ತಂಡವು ಯೂಟ್ಯೂಬಲ್ಲಿ ಹೆಚ್ಚು ವೀಕ್ಷಣೆ ಪಡೆದ ತಂಡವಾಗಿ 5000ರೂ. ಬಹುಮಾನ ಪಡೆಯಿತು. ಇತರೆ ತಂಡಗಳಾದ ಸಾಂಗಾತಿ ವಾಮಂಜೂರ್ ಮತ್ತು ಸ್ಟಾರ್  ಬೆಲ್ಸ್ ನಿಡ್ಡೆಲ್ ತಂಡಗಳನ್ನೂ ಗೌರವಿಸಲಾಯಿತು.

ವೇದಿಕೆಯಲ್ಲಿ ಗುರಿಕಾರ ಎರಿಕ್ ಒಝೇರಿಯೊ, ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ಕಿಶೋರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸಂಗೀತದಲ್ಲಿ ವಿಷ್ಣು ಶಿರೋಡ್ಕರ್ (ಕೀ ಬೋರ್ಡ್), ಸುರ್ಜಿತ್ ಥಲಿ (ತಬ್ಲಾ), ಪ್ರಕಾಶ್ ಆಮೋನ್ಕರ್ (ಆಕ್ಟೊಪ್ಯಾಡ್) ಮತ್ತು ರಸೆಲ್ ರಾಡ್ರಿಗಸ್ ( ಗಿಟಾರ್) ಸಹಕರಿಸಿದರು. ಮಾನಸಿ ವಾಲ್ವೆ ನಿರೂಪಿಸಿದರು.

Similar News