ಬೆಂಗಳೂರು | ಮನೆಯಲ್ಲಿ ಬೆಂಕಿ ಅವಘಡ: ಮಹಿಳೆ ಸಜೀವ ದಹನ

Update: 2023-02-07 15:40 GMT

ಬೆಂಗಳೂರು, ಫೆ.7: ನಗರದ ಮಲ್ಲೇಶ್ವರಂನ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿಮಹಿಳೆ ಸಜೀವ ದಹನವಾಗಿರುವ ಘಟನೆ ವರದಿಯಾಗಿದೆ.

55 ವರ್ಷದ ಮೇರಿ ಮೃತ ದುರ್ವೈವಿ ಎಂದು ಪೊಲೀಸರು ಗುರುತಿಸಿದ್ದಾರೆ. 

ಮಂಗಳವಾರ ಸಂಜೆ ಮಲ್ಲೇಶ್ವರಂನ ಮಂತ್ರಿಮಾಲ್‍ನ ಹಿಂಭಾಗದಲ್ಲಿ ಇರುವ ಮನೆಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡು ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. 

ಈ ದುರ್ಘಟನೆಲ್ಲಿ ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ.ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ. 

Similar News