ಫೆ.9ರಂದು ಬನ್ನೇರುಘಟ್ಟ ಮೃಗಾಲಯ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿಲ್ಲ

Update: 2023-02-07 16:29 GMT

ಬೆಂಗಳೂರು, ಫೆ.7: ಜಿ-20 ಪ್ರತಿನಿಧಿಗಳ ಫೆ.9 ರಿಂದ ಫೆ.11ರವರೆಗೆ ನಗರದಲ್ಲಿ ನಡೆಯಲಿದ್ದು, ಮೊದಲ ಸಭೆಯು ‘ಭೂ ಅಪಮೌಲೀಕರಣದ ಪ್ರತಿಬಂಧನ (ತಡೆ), ಜೀವ ಪರಿಸರ ಮರುಸ್ಥಾಪನೆಯ ತ್ವರಿತಗೊಳಿಸುವಿಕೆ, ಜೀವ ವೈವಿದ್ಯತೆಯ ಸಮೃದ್ದೀಕರಣ’ ವಿಷಯದಲ್ಲಿ ನಡೆಯಲಿದೆ. ಫೆ.9ರಂದು  ಜಿ-20 ಪ್ರತಿನಿಧಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೀಕ್ಷಣೆಗೆ ಬರಲಿದ್ದಾರೆ.

ಆದುದರಿಂದ ಸಂರಕ್ಷಣೆ ಮತ್ತು ಭದ್ರತೆಯ ದೃಷ್ಟಿಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಉದ್ಯಾನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Similar News