ರಾಜ್ಯದ ಎಲ್ಲ ಸಿಎನ್‍ಜಿ ವಾಹನಗಳ ಸಿಲಿಂಡರ್ ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆ: ಸಾರಿಗೆ ಇಲಾಖೆ ಆದೇಶ

Update: 2023-02-07 17:53 GMT

ಬೆಂಗಳೂರು, ಫೆ.7: ರಾಜ್ಯದ ಎಲ್ಲ ಸಿಎನ್‍ಜಿ ವಾಹನ ಮಾಲಕರು ತಮ್ಮ ವಾಹನಗಳ ಸಿಲಿಂಡರ್ ಗಳಿಗೆ ಕಡ್ಡಾಯ ಸುರಕ್ಷತಾ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಸಾರಿಗೆ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಈ ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರಕಾರವು ನಗರದ ಎಂಜಿಆರ್ ಹೈಡ್ರೋಟೆಸ್ಟ್ ಇಂಕ್ ಅನ್ನು ಅಧಿಕೃತವಾಗಿ ನೇಮಿಸಿದೆ. 

ಎಂಜಿಆರ್ ಹೈಡ್ರೋಟೆಸ್ಟ್ ಇಂಕ್ ಸಂಸ್ಥೆಯ ಮೂಲಕ ವಾಹನಗಳಿಗೆ ಪರೀಕ್ಷೆಯನ್ನು ನಡೆಸಿದ ಬಳಿಕ ಪ್ರಮಾಣಪತ್ರವನ್ನು ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸಂಸ್ಥಯ ವಬ್‍ಸೈಟ್‍ನಿಂದ ಪಡೆಯಬಹುದಾಗಿದೆ. ಮೂರು ವರ್ಷಗಳನ್ನು ಪೂರೈಸಿದ ಸಿಎನ್‍ಜಿ ವಾಹನಗಳು, ಫಿಟ್‍ನೆಸ್ ಪರೀಕ್ಷೆಯ ಸಮಯದಲ್ಲಿ ಈ ಸುರಕ್ಷತಾ ಪ್ರಮಾಣಪತ್ರವನ್ನು ಇತರ ದಾಖಲೆಗಳೊಂದಿಗೆ ಹಾಜರುಪಡಿಸುವುದು ಕಡ್ಡಾಯವಾಗಿದೆ ಎಂದು ಪ್ರಕಟನೆ ತಿಳಿಸಿದೆ.

Similar News