ಸಂಚಾರ ನಿಯಮ ಉಲ್ಲಂಘನೆ: ಬೆಂಗಳೂರಿನಲ್ಲಿ 5ನೇ ದಿನ 45 ಕೋಟಿ ರೂ.ದಂಡ ಪಾವತಿ

Update: 2023-02-08 18:29 GMT

ಬೆಂಗಳೂರು, ಫೆ. 8: ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಪಾವತಿಸುವವರಿಗೆ ಶೇ.50 ರಷ್ಟು ರಿಯಾಯಿತಿ ದಿನವೂ ಅಂತಿಮಗೊಳ್ಳುತ್ತಿರುವ ಬೆನ್ನಲ್ಲೇ ಆರನೆ ದಿನಕ್ಕೆ 45 ಕೋಟಿ ರೂ.ಗಳಿಗೂ ಹೆಚ್ಚು ದಂಡ ಸಂಗ್ರಹಗೊಂಡಿದೆ. 

ಫೆ.3ರಂದು ಈ ವಿನಾಯಿತಿ ಜಾರಿಗೆ ಬಂದಿದ್ದು, ಮೊದಲ ದಿನವೆ 5,61,45,000 ರೂಪಾಯಿಗೂ ಅಧಿಕ ದಂಡದ ಮೊತ್ತ ಸಂಗ್ರಹವಾಗಿತ್ತು. ಎರಡನೇ ದಿನ ಬರೋಬ್ಬರಿ 6,80,72,500 ರೂ. ದಂಡ ಸಂಗ್ರಹವಾಗಿತ್ತು. ಮೂರನೆ ದಿನ 7,49,94,870 ರೂಗಳು ಸಂಗ್ರಹವಾದರೆ, ನಾಲ್ಕನೆ ದಿನ 9,57,12,420, ಸಂಗ್ರಹಗೊಂಡರೆ,ಐದನೆ ದಿನವಾದ ನಿನ್ನೆ 8,13,12,200 ಸಂಗ್ರಹಗೊಂಡು ಒಟ್ಟು 41,20,89,231 ರೂ., ಸಂಗ್ರಹವಾಗಿ 14,71,231ಪ್ರಕರಣಗಳು ಇತ್ಯರ್ಥಗೊಂಡಿದೆ.

ಬುಧವಾರ ಬೆಳಗ್ಗೆಯಿಂದ ಮತ್ತೆ ದಂಡ ಪಾವತಿ ಬಿರುಸಿನಿಂದ ನಡೆಯುತ್ತಿದ್ದು, ಅದು 45 ಕೋಟಿ ದಾಟಿದೆ. ಸಂಚಾರ ನಿಯಮ ಉಲ್ಲಂಘನೆಯ ರಿಯಾಯಿತಿ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು ಸಂಜೆ ವೇಳೆಗೆ 45 ಕೋಟಿ ಗೂ ಹೆಚ್ಚು ದಂಡ ಸಂಗ್ರಹಗೊಂಡಿದೆ. 

Similar News