×
Ad

ಚೀನಾದ ಮಹಿಳೆಯಿಂದ ಜಪಾನ್ ನ ದ್ವೀಪ ಖರೀದಿ

Update: 2023-02-13 00:20 IST

ಟೋಕಿಯೊ, ಫೆ.12: ಜಗತ್ತಿನ ಹಲವೆಡೆ ಚೀನಾ ಬೇಹುಗಾರಿಕೆ ನಡೆಸುತ್ತಿದೆ ಎಂಬ ವರದಿಯ ನಡುವೆ, ಜಪಾನ್ ನ ಜನವಸತಿ ಇಲ್ಲದ ದ್ವೀಪವೊಂದನ್ನು ಚೀನಾದ ಮಹಿಳೆ ಖರೀದಿಸಿರುವುದು ಬೆಳಕಿಗೆ ಬಂದಿದ್ದು ಇದು ಅಪಾಯದ ಸಂದೇಶ ರವಾನಿಸಿದೆ ಎಂದು ಜಪಾನ್ನ ಮಾಧ್ಯಮಗಳು ವರದಿ ಮಾಡಿವೆ.

ಒಕಿನಾವಾ ಪ್ರಾಂತದ ಆಡಳಿತ ವ್ಯಾಪ್ತಿಗೆ ಬರುವ ಜನವಸತಿ ಇಲ್ಲದ ಯನಾಹಾ ದ್ವೀಪವನ್ನು ಚೀನಾದ ಮಹಿಳೆ ಖರೀದಿಸಿದ್ದು, ಆಕೆ ಇತ್ತೀಚೆಗೆ ದ್ವೀಪಕ್ಕೆ ಭೇಟಿ ನೀಡಿ ಇಲ್ಲಿಯ ಫೋಟೋ ತೆಗೆದಿದ್ದಾಳೆ ಹಾಗೂ ವೀಡಿಯೊ ರೆಕಾರ್ಡ್ ಮಾಡಿದ್ದಾಳೆ ಎಂದು `ಜಪಾನ್ ಟೈಮ್ಸ್' ವರದಿ ಮಾಡಿದೆ.

ಈ ದ್ವೀಪದ 50% ಪ್ರದೇಶ ಟೋಕಿಯೊ ಮೂಲದ ಸಂಸ್ಥೆಯ ಅಧೀನದಲ್ಲಿದೆ. ಉಳಿದ ಪ್ರದೇಶವನ್ನು ಚೀನಾದ ಮಹಿಳೆ ಖರೀದಿಸಿದ್ದಾಳೆ ಎಂದು ವರದಿಯಾಗಿದೆ. ಈ ವರದಿಯನ್ನು ಚೀನಾದ ಮಾಧ್ಯಮಗಳೂ ದೃಢಪಡಿಸಿವೆ.

Similar News