×
Ad

ಶೇ.50 ಸಂಚಾರ ದಂಡ ರಿಯಾಯಿತಿ: ಇನ್ನೂ ಎರಡು ವಾರ ಅವಧಿ ವಿಸ್ತರಣೆ ಸಾಧ್ಯತೆ

Update: 2023-02-13 22:16 IST

ಬೆಂಗಳೂರು, ಫೆ.13: ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕೇಸ್‍ಗಳಿಗೆ ಶೇ.50 ರಿಯಾಯಿತಿ ನೀಡಿ ದಂಡ ಪಾವತಿಸುವಂತೆ ರಾಜ್ಯ ಸರಕಾರ 8 ದಿನಗಳ ಕಾಲಾವಕಾಶ ನೀಡಿತ್ತು. ಮತ್ತೆ ಎರಡು ವಾರಗಳ ಅವಧಿಗೆ ರಿಯಾಯಿತಿ ವಿಸ್ತರಿಸುವ ಸಾಧ್ಯತೆ ಇದೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರು, ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ರಿಯಾಯಿತಿಯನ್ನು ಇನ್ನೂ ಎರಡು ವಾರ ವಿಸ್ತರಣೆ ಮಾಡುವ ಸಾಧ್ಯತೆಯಿದೆ. ಫೆ. 14ರಂದು ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದರು. 

ಶೇ. 50 ದಂಡ ರಿಯಾಯಿತಿ ನೀಡಿದ ನಂತರ ಇಲ್ಲಿಯವರೆಗೂ 52,11,424 ಪ್ರಕರಣಗಳು ಮುಗಿದಿವೆ. ಒಟ್ಟು 152 ಕೋಟಿ ದಂಡ ಸಂಗ್ರಹವಾಗಿದೆ. ಮುಂದಿನ ಎರಡು ವಾರಗಳ ಕಾಲ ಅವಧಿ ವಿಸ್ತರಣೆ ಮಾಡುವಂತೆ ಸರಕಾರದಿಂದ ಮನವಿ ಇದೆ. ಈ ಸಂಬಂಧ ಸರಕಾರ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಿದೆ ಎಂದು ಹೇಳಿದರು. 

Similar News