ಪಿ.ಎ ಕಾಲೇಜಿನಲ್ಲಿ ಎಂ.ಬಿ.ಎ ಮೊದಲ ವರ್ಷದ ಓರಿಯೆಂಟೇಷನ್ ಕಾರ್ಯಕ್ರಮ

Update: 2023-02-13 16:54 GMT

ಮಂಗಳೂರು: ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಸ್ಟಡೀಸ್ ಅಂಡ್ ರಿಸರ್ಚ್, ಪಿ. ಎ ಕಾಲೇಜ್, ಮಂಗಳೂರಿನ ಮೊದಲ ವರ್ಷದ ಓರಿಯೆಂಟೇಷನ್ ಕಾರ್ಯಕ್ರಮ ಶನಿವಾರ ಪೇಸ್ ಕ್ಯಾಂಪಸ್ ನಲ್ಲಿ ನಡೆಯಿತು. 

ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಹಿರಿಯ ಉಪನಿರ್ದೇಶಕ ಝೀವಲ್ ಖಾನ್, 'ಕೌಶಲ್ಯ ಅಭಿವೃದ್ಧಿ ರಹಿತ ಎಂಬಿಎ ಪದವಿ ವ್ಯರ್ಥ' ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ನಿರ್ದೇಶಕರಾದ ಡಾ . ಸಯ್ಯದ್ ಅಮೀನ್ ಅಹಮ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪಿ.ಎ ಕಾಲೇಜು ಆಫ್ ಫಾರ್ಮಸಿ ಇದರ ಪ್ರಾಂಶುಪಾಲರಾದ ಡಾ.ಸಲೀಮುಲ್ಲಾ ಖಾನ್,  ಪಿ.ಎ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಂಶುಪಾಲ ಡಾ. ಸರ್ಫರಾಜ್ ಜೆ ಹಾಸಿಂ, ಪಿ.ಎ  ಪಾಲಿಟೆಕ್ನಿಕ್ ಕಾಲೇಜು ಇದರ  ಪ್ರಾಂಶುಪಾಲ ಪ್ರೊ ಕೆ. ಪಿ ಸೂಫಿ  ,  ಪಿ.ಎ ಇನ್ಸಿಟುಟ್ ಆಫ್ ಫಿಸಿಯೋಥೆರಪಿ ಪ್ರಾಂಶುಪಾಲ ಡಾ. ಸಜೀಷ್ ಈ ಸಂದರ್ಭದಲ್ಲಿ ಮಾತನಾಡಿದರು.

ಶರ್ಫುದ್ದೀನ್  ಎಜಿಎಂ, ಡಾ. ಶರ್ಮಿಳಾ ಕುಮಾರಿ, ಉಪ ಪ್ರಾಂಶುಪಾಲರು ಪಿ. ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಇಕ್ಬಾಲ್, ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ  ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.

ಕಾರ್ಯಕ್ರಮದಲ್ಲಿ ಝೀವಲ್ ಖಾನ್ ರವರನ್ನ ಸನ್ಮಾನಿಲಾಯಿತು. 

ಪ್ರೊ. ಶಮ ಸ್ವಾಗತಿಸಿ, ಡಾ. ಜೋಹೆಬ್ ಅಲಿ ವಂದಿಸಿದರು. ಕು. ನುಷ್ರ ಕಾರ್ಯಕ್ರಮವನ್ನು ನಿರೂಪಿಸಿದರು.

Similar News