×
Ad

ಕಾಂಚನ ಹೋಂಡಾ ಆ್ಯಕ್ಟಿವಾ ‘H-Smart' ಮಾರುಕಟ್ಟೆಗೆ: ಬಿಡುಗಡೆಯಂದೇ 100 ವಾಹನಗಳ ದಾಖಲೆ ಮಾರಾಟ

ಎಸ್‌ಸಿ-ಎಸ್‌ಟಿಯವರಿಗೆ ವಿಶೇಷ ಕೊಡುಗೆ 70,000 ರೂ.

Update: 2023-02-14 11:39 IST

ಮಂಗಳೂರು, ಫೆ.14: ಹೋಂಡಾ ದ್ವಿಚಕ್ರ ವಾಹನಗಳ ಮಾರಾಟ ಹಾಗೂ ಸೇವೆಯಲ್ಲಿ ಕರಾವಳಿಯಾದ್ಯಂತ ಮುಂಚೂಣಿಯಲ್ಲಿರುವ ಹಾಗೂ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತ್ತಿರುವ ಕಾಂಚನ ಮೋಟಾರ್ಸ್‌ನಲ್ಲಿ ಹೊಚ್ಚ ಹೊಸ ಆ್ಯಕ್ಟಿವಾ H-Smart ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಹೊಸ ದ್ವಿಚಕ್ರ ವಾಹನದ ಮೊದಲ ಗ್ರಾಹಕರಿಗೆ ಕೀಲಿ ಕೈಯನ್ನು ಹಸ್ತಾಂತರಿಸಲಾಯಿತು.

ಆ್ಯಕ್ಟಿವಾ H-Smart ದ್ವಿಚಕ್ರ ವಾಹನವು ಹೊಸ ಟೆಕ್ನಾಲಜಿ ಹಾಗೂ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟಿದ್ದು, ಇದು ಸ್ಮಾರ್ಟ್ ಕೀಯನ್ನು ಹೊಂದಿದ್ದು ಇದರ ಪ್ರಮುಖ ವೈಶಿಷ್ಟ. ದ್ವಿಚಕ್ರ ವಾಹನ ಸವಾರರಿಗೆ ಸುಲಭ ರೀತಿಯಲ್ಲಿ ವಾಹನ Start/ Stop, ಸೀಟ್, ಫ್ಯೂಲ್‌ಕಾಪ್ ಹಾಗೂ ಹ್ಯಾಂಡಲ್ ಲಾಕ್‌ಅನ್ನು ಸ್ಮಾರ್ಟ್ ಕೀಯ ಮೂಲಕ ಅನ್‌ಲಾಕ್ ಮಾಡಬಹುದಾಗಿದೆ. ಈ ದ್ವಿಚಕ್ರ ವಾಹನದ ಸಂಪೂರ್ಣ ಸುರಕ್ಷತೆಗಾಗಿ ಆ್ಯಂಟಿ ತೆಫ್ಟ್ ಸಿಸ್ಟಮ್ ಅಳವಡಿಸಲಾಗಿದ್ದು, ಇದು 6ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರ ಶೋರೂಂ ಬೆಲೆ 82,477 ರೂ. ನಿಂದ ಆರಂಭವಾಗುತ್ತದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ವಿಶೇಷ ಕೊಡುಗೆ: ಡಾ. ಬಿ.ಆರ್.ಅಂಬೇಡ್ಕರ್‌ಅಭಿವೃದ್ಧಿ ನಿಗಮದಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಜನರ ಅಭಿವೃದ್ಧಿಗಾಗಿ ದ್ವಿಚಕ್ರ/ತ್ರಿಚಕ್ರ ವಾಹನವನ್ನು 50,000 ರೂ. ಸಬ್ಸಿಡಿ ಹಾಗೂ 20,000 ರೂ. ಸಾಲದ ಮೂಖಾಂತರ ನೀಡಲಾಗುವುದು. ಈ ಯೋಜನೆಗೆ ಸಂಬಂಧಿಸಿದಂತೆ ಕಾಂಚನಾ ಹೋಂಡಾದಿಂದ ವಾಹನಗಳ ಮೇಲೆ ಹೆಚ್ಚುವರಿ ರಿಯಾಯಿತಿ ಹಾಗೂ ಆಫರ್‌ಗಳನ್ನು ನೀಡಲಾವುದು.

ಪ್ಯಾಬ್ಯುಲೆಸ್ ಫೆಬ್ರವರಿ ಫಂಡಾ ಆಫರ್: ಕಾಂಚನ ಹೋಂಡಾ ಸಂಸ್ಥೆಯು ತಮ್ಮ ಗ್ರಾಹಕರಿಗೆ ಪ್ರತೀ ತಿಂಗಳು ಹಲವಾರು ರೀತಿಯ ಆಫರ್‌ಗಳನ್ನು ಪರಿಚಯಿಸುತ್ತಾ ಬಂದಿದ್ದು, ಇದೀಗ ಫೆಬ್ರವರಿ ತಿಂಗಳಲ್ಲಿ ‘ಪ್ಯಾಬ್ಯುಲೆಸ್ ಫೆಬ್ರವರಿ ಫಂಡಾ’ ಎಂಬ ಆಫರ್‌ನ್ನು ಪರಿಚಯಿಸಿದೆ.

ಈ ಆಫರ್‌ನ ಪ್ರಕಾರ ಗ್ರಾಹಕರು ಯಾವುದೇ ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದಲ್ಲಿ ದುಬೈ/ಗೋವಾ/ಮುನ್ನಾರ್‌ಗೆ ಹಾಲಿಡೇ ಟ್ರಿಪ್ ಗೆಲ್ಲಬಹುದಾಗಿದೆ. ಪ್ರತೀ ವಾರದ ಡ್ರಾದಲ್ಲಿ ಮಡಿಕೇರಿ/ ಚಿಕ್ಕಮಗಳೂರಿಗೆ ಟ್ರಿಪ್ ಗೆಲ್ಲಬಹುದಾಗಿದೆ.

ಗ್ರಾಹಕರಿಗೆ ವಿಶೇಷ ರಿಯಾಯತಿಯ ಬಡ್ಡಿದರ, ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಮಂಜೂರಾತಿ ಮಾಡಿಕೊಡಲಾಗುವುದು ಹಾಗೂ ಸ್ಪಾಟ್ ಬುಕ್ಕಿಂಗ್ ಮಾಡಿದಲ್ಲಿ ಫುಲ್‌ಟ್ಯಾಂಕ್ ಪೆಟ್ರೋಲ್/ಬ್ರಾಂಡೆಡ್ ಶರ್ಟ್/ಬ್ರಾಂಡೆಡ್ ರೈನ್‌ಕೋಟ್ ಗೆಲ್ಲಬಹುದಾಗಿದೆ. ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಖಚಿತ ಉಡುಗೊರೆಯಾಗಿ ಹೆಲ್ಮೆಟ್, ಟಿ-ಶರ್ಟ್, ಮಗ್ ಹಾಗೂ 15 ಲಕ್ಷ ರೂ.ನ ರೈಡರ್ಸ್‌ ಇನ್ಶೂರೆನ್ಸ್ ನೀಡಲಾಗುವುದು. ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್‌ರೈಡ್‌ಗಾಗಿ ಇಂದೇ ಜಿಲ್ಲೆಯ ಕಂಕನಾಡಿ-ಮಂಗಳೂರು, ಕೂಳೂರು-ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ, ಮುಡಿಪು ಹಾಗೂ ಮಾಣಿ ಶಾಖೆಗಳನ್ನು ಸಂಪರ್ಕಿಸಬಹುದು ಅಥವಾ ಮೊ.ಸಂ.: 9945564997ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Similar News