ಫೆ.25 ರಂದು ಪುದು ಗ್ರಾಮ ಪಂಚಾಯತ್ ಚುನಾವಣೆ: ಒಟ್ಟು 102 ನಾಮಪತ್ರ ಸಲ್ಲಿಕೆ

Update: 2023-02-14 13:07 GMT

ಫರಂಗಿಪೇಟೆ: ಮುಂಬರುವ ವಿಧಾನ ಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಚರ್ಚೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರ ವ್ಯಾಪ್ತಿಯ ಪುದು ಗ್ರಾಮ ಪಂಚಾಯತ್ ಚುನಾವಣೆ ಫೆ.25 ರಂದು ನಡೆಯಲಿದೆ

ಈಗಾಗಲೇ ಕಾಂಗ್ರೆಸ್, ಬಿಜೆಪಿ ಎಸ್.ಡಿಪಿಐ, ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ

ಫೆ.14 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಒಟ್ಟು 10 ವಾರ್ಡ್ ಗಳ 34 ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ 34, ಬಿಜೆಪಿ ಬೆಂಬಲಿತ 32 ಎಸ್ ಡಿಪಿಐ 28 ಹಾಗೂ ಪಕ್ಷೇತರ 8 ಅಭ್ಯರ್ಥಿಗಳು ಸೇರಿದಂತೆ ಒಟ್ಟು 102 ನಾಮ ಪತ್ರ ಸಲ್ಲಿಸಿದ್ದಾರೆ. ಫೆ.25 ರಂದು ಮತದಾನ ನಡೆಯಲಿದ್ದು, ಫೆ.28 ರಂದು ಫಲಿತಾಂಶ ಪ್ರಕಟವಾಗಲಿದೆ.

Similar News