×
Ad

‘ಪ್ರೀತಿ ಕಿಚನ್ ಅಪ್ಲಾಯನ್ಸಸ್’ನ ಪ್ರೆಶರ್ ಕುಕ್ಕರ್ ಮಾರುಕಟ್ಟೆಗೆ ಬಿಡುಗಡೆ

Update: 2023-02-14 20:16 IST

ಮಂಗಳೂರು: ನಗರದ ಸಿಟಿ ಸೆಂಟರ್ ಬಳಿಯ ಕೆ.ಎಸ್.ರಾವ್ ರಸ್ತೆಯಲ್ಲಿರುವ ‘ಮಂಗಳೂರು ಡಿಜಿವೇಲ್ ಕಾರ್ಪೊರೇಷನ್’ ಮಳಿಗೆಯಲ್ಲಿ ‘ಪ್ರೀತಿ ಕಿಚನ್ ಅಪ್ಲಾಯನ್ಸಸ್’ನ ಪ್ರೆಶರ್ ಕುಕ್ಕರ್‌ನ್ನು ಮಂಗಳವಾರ ಕದ್ರಿ ಠಾಣೆಯ ಎಸ್ಸೈ ಉಮೇಶ್ ಕುಮಾರ್  ಎಂ.ಎನ್. ಬಿಡುಗಡೆಗೊಳಿಸಿದರು.

ಈ ಸಂದರ್ಭ  ಕಂಪನಿಯ ಬ್ರಾಂಚ್ ಮ್ಯಾನೇಜರ್ ಆಬಿದ್ ಅಲಿ, ಮಂಗಳೂರು ಮಾರ್ಕೆಟಿಂಗ್ ಗ್ರೂಪ್‌ನ  ಆಡಳಿತ ನಿರ್ದೇಶಕ  ಬಿ. ಬಶೀರ್, ಸಿಟಿ ಫ್ಯಾನ್ಸಿ ಮಾಲಕ ಬಿ.ಎಂ.ಬಶೀರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರೀತಿ ಕಿಚನ್ ಅಪ್ಲಾಯನ್ಸಸ್’ನವರ ಮಿಕ್ಸಿಯು ಈಗಾಗಲೇ ಮಾರುಕಟ್ಟೆಯಲ್ಲಿದ್ದು, ಈ ಕಂಪನಿಯ ಉತ್ತಮ ಗುಣಮಟ್ಟದ ಪ್ರೆಶರ್ ಕುಕ್ಕರ್ ಮಾರುಕಟ್ಟೆಗೆ ಪರಿಚಯಿಸಿದೆ. ಒಂದುವರೆ ಲೀ.ನಿಂದ 5 ಲೀ.ವರೆಗಿನ ಟ್ರಿಪ್ಲಿ ಸ್ಟೈನ್ಲೆಸ್ ಸ್ಟೀಲ್, ಸ್ಟೈನ್ಲೆಸ್ ಸ್ಟೀಲ್, ಅಲುಮ್ನಿಯಂ ಪ್ರೆಶರ್ ಕುಕ್ಕರ್ ಲಭ್ಯವಿದೆ. ಐದು ವರ್ಷದ ವಾರಂಟಿಯೂ ಇದೆ ಎಂದು ಪ್ರಕಟನೆ ತಿಳಿಸಿದೆ.

Similar News