×
Ad

ಅಲ್ಪಸಂಖ್ಯಾತ, ಕ್ರೈಸ್ತ ಮತದಾರರ ಹೆಸರು ಡಿಲೀಟ್; ಆಯೋಗ ತನಿಖೆ ನಡೆಸಿ ಪರಿಷ್ಕೃತ ಮತದಾರರ ಪಟ್ಟಿ ಅಧಿಕೃತಗೊಳಿಸಲು ಮನವಿ

Update: 2023-02-14 20:40 IST

ಬೆಂಗಳೂರು, ಫೆ.14: ಶಿವಾಜಿನಗರ ಕ್ಷೇತ್ರದಲ್ಲಿ ಮತ ಪಟ್ಟಿಯಿಂದ ಅಲ್ಪಸಂಖ್ಯಾತ, ಕ್ರೈಸ್ತ ಸಮುದಾಯದ ಬಹುತೇಕ ಮತದಾರರ ಹೆಸರುಗಳನ್ನು ತೆಗೆದುಹಾಕಿರುವ ಪ್ರಕರಣದ ಹಿನ್ನೆಲೆ ಕೂಡಲೇ ಆಯೋಗ ತನಿಖೆ ನಡೆಸಿ, ನೂತನ ಹಾಗೂ ಪರಿಷ್ಕೃತ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಅಧಿಕೃತಗೊಳಿಸಬೇಕೆಂದು ಮಹಾಧರ್ಮ ಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಎ.ಕಾಂತರಾಜ್ ಮುಖ್ಯ ಚುನಾವಣಾಧಿಕಾರಿಗೆ ಮನವಿ ಮಾಡಿದ್ದಾರೆ.

2023ರ ಅಂತಿಮ ಮತದಾರರ ಪಟ್ಟಿ ಪ್ರಕಟವಾದ ನಂತರ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಮತದಾರರ ಹೆಸರುಗಳನ್ನು ತೆಗೆದು ಹಾಕಲಾಗಿರುವ ಆಘಾತಕಾರಿ ವರದಿಯು ನಮ್ಮ ಗಮನಕ್ಕೆ ಬಂದಿದೆ. ಈ ಕುರಿತು ನಿಗಾವಹಿಸಿ ಪರೀಕ್ಷಿಸಲಾಗಿ, ಕ್ರೈಸ್ತ ಸಮುದಾಯದ ನೂರಾರು ಮತದಾರರ ಹೆಸರುಗಳು ಈ ಪಟ್ಟಿಯಲ್ಲಿ ಇಲ್ಲದಿರುವುದು ಪತ್ತೆಯಾಗಿದ್ದು, ಚುನಾವಣಾ ಅಕ್ರಮ ಹಾಗೂ ಅವ್ಯವಹಾರಗಳ ಕುರಿತು ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.

Similar News